ಬೆಂಗಳೂರು:- ಇಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಲಿರುವ ಟೀಮ್ ಇಂಡಿಯಾಗೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶುಭ ಕೋರಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯಾವಳಿ ನಡೆಯುತ್ತಿದೆ. ಇಡೀ ದೇಶ ಭಾರತ ಗೆಲ್ಲಬೇಕೆಂದು ಪೂಜೆ ಸಲ್ಲಿಸ್ತಿದೆ. ಇಡೀ ದೇಶ ನಿರೀಕ್ಷೆ ಯಲ್ಲಿದೆ ಎಲ್ಲರೂ ಪೂಜೆ, ಎಲ್ಲರ ಆಶಯವೂ ಭಾರತ ಗೆಲ್ಲಬೇಕು ಅನ್ನೋದಾಗಿದೆ. ಒಂದೂ ಪಂದ್ಯ ಸೋಲದೇ ಭಾರತ ಸತತ ಗೆದ್ದುಕೊಂಡು ಬಂದಿದೆ. ಹಾಗಾಗಿ ಇವತ್ತಿನ ಫೈನಲ್ ಸಹ ಭಾರತಕ್ಕೆ ಉತ್ತಮ ಗೆಲ್ಲುವು ಸಿಗಲಿ.
ಆಲ್ ದ ಬೆಸ್ಟ್ ಅಂತ ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ಶುಭ ಕೋರ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.