ಜೇನುತುಪ್ಪ ಮತ್ತು ತುಪ್ಪವನ್ನು ಮಿಕ್ಸ್ ಮಾಡಿ ತಿಂದರೆ ಏನಾಗುತ್ತದೆ ಎಂಬುವುದು ಹಲವರಿಗೆ ತಿಳಿದಿಲ್ಲ. ಇವೆರಡರಲ್ಲಿಯೂ ಔಷಧೀಯ ಗುಣಗಳಿವೆ. ಹಾಗಾಗಿ ಇವೆರಡನ್ನು ಮನೆಮದ್ದುಗಳಲ್ಲಿ ಹೆಚ್ಚು ಬಳಸುತ್ತಾರೆ. ತುಪ್ಪ ರುಚಿಯಾಗಿದ್ದರೆ ಜೇನುತುಪ್ಪ ಸಿಹಿ ಗುಣವನ್ನು ಹೊಂದಿದೆ. ಆದರೆ ಇವೆರಡನ್ನು ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ.
ತಜ್ಞರು ತಿಳಿಸಿದ ಪ್ರಕಾರ ತುಪ್ಪ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿದಾಗ ವಿಷಕಾರಿ ಅಂಶ ಉತ್ಪತ್ತಿಯಾಗುತ್ತದೆ. ಇದು ವೇಗವಾಗಿ ದೇಹವನ್ನು ಹರಡುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆಯಂತೆ.
ತುಪ್ಪ ಜೇನುತುಪ್ಪವನ್ನು ಬೆರೆಸಿದಾಗ ಕ್ಲೋಸ್ಟ್ರಿಡಿಯಂ ಬೊಟುಲಿನಂ ಎಂಬ ಅಂಶ ಉತ್ಪತ್ತಿಯಾಗುತ್ತದೆ. ಇದು ಒಂದು ರೀತಿಯ ಬ್ಯಾಕ್ಟೀರಿಯಾವಾಗಿದ್ದು, ಇದು ದೇಹದಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾದಾಗ ಅಪಾಯಕಾರಿ ಜೀವಾಣುಗಳನ್ನು ಉತ್ಪಾದಿಸುತ್ತದೆ. ಇದು ಹೊಟ್ಟೆನೋವು, ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎನ್ನಲಾಗಿದೆ.