ಬೆಂಗಳೂರು:– ನಗರದ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಭೇಟಿ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಹಿನ್ನೆಲೆ, ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ, ಆರ್ಶಿವಾದವನ್ನು ಪಡೆದಿದ್ದಾರೆ.
ಇದಾದ ಬಳಿಕ ಮಾತನಾಡಿದ ಅವರು ‘ರಾಜ್ಯದ ಮುತ್ಸದಿ, ಹಿರಿಯರು, ಮಣ್ಣಿನ ಮಗ ದೇವೇಗೌರನ್ನು ಭೇಟಿ ಮಾಡಿದೆ. ವಿಪಕ್ಷ ನಾಯಕನಾಗಿದ್ದಕ್ಕೆ ಅಭಿನಂಧನೆ ಸಲ್ಲಿಸಿದ್ರು, ಸಾಕಷ್ಟು ಹೊತ್ತು ಚರ್ಚೆ ಮಾಡಿದೆ. ಕಾವೇರಿ ಹಾಗೂ ಮಹದಾಯಿ ನದಿ ವಿಚಾರವಾಗಿ ಹೆಚ್ಡಿಡಿ ಸಲಹೆ ನೀಡಿದರು. ಇದಕ್ಕೆ ಸಂಬಂಧಪಟ್ಟಂತೆ ಪೂರ್ತಿ ಸಹಕಾರ ನೀಡುತ್ತೇನೆ ಎಂದು ಹೇಳಿದ್ದೇನೆ ಎಂದರು
ಇನ್ನು ಇದೇ ವೇಳೆ ‘ಮೈತ್ರಿ ವಿಚಾರವಾಗಿ ಕೂಡ ಮಾತುಕತೆ ಮಾಡಿದ್ದೇವೆ. ವಿಧಾನಸಭೆ ಒಳಗೆ, ಹೊರಗೆ ಹೋರಾಟ ಮಾಡುತ್ತೀವಿ, ಆ ಮೂಲಕ ಸರ್ಕಾರಕ್ಕೆ ನಡುಕ ಹುಟ್ಟುವ ಕೆಲಸ ಮಾಡುತ್ತೇವೆ. ಜಮೀರ್ ಹೇಳಿಕೆಯಿಂದ ಕೋಮು ಸೌಹಾರ್ದತೆ ಹಾಳಾಗುವ ರೀತಿಯಲ್ಲಿ ಜಮೀರ್ ಮಾತನಾಡಿದ್ದಾರೆ. ಜಮೀರ್ ಮಾತಿಗೆ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ರು, ವಿಧಾನಸಭೆಯಲ್ಲಿ ಚರ್ಚೆ ಮಾಡಿ ಎಂದು ಸೂಚನೆ ನೀಡಿದ್ದಾರೆ.
ಕುಮಾರಸ್ವಾಮಿ, ರೇವಣ್ಣ ಬೆಳಗ್ಗೆ ಕರೆ ಮಾಡಿ ಹಾರೈಸಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಟ ಮಾಡುತ್ತೇವೆ. ಜೊತೆಗೆ ಹೆಚ್ಡಿಡಿ, ಬಿಎಸ್ವೈ ರಾಜಕೀಯ ತಂತ್ರಗಾರಿಕೆಯನ್ನು ನಾವು ಬಳಿಕೆ ಮಾಡಿಕೊಳ್ತೀವಿ ಎಂದರು