ಬೆಂಗಳೂರು:- ಬೆಂಗಳೂರು ನಗರದಾದ್ಯಂತ ಅನ್ಬಾಕ್ಸಿಂಗ್ ಬೆಂಗಳೂರು ಪೌಂಡೇಷನ್ ವತಿಯಿಂದ ಡಿಸೆಂಬರ್-2023ರ ಮಾಹೆಯಲ್ಲಿ “ಬೆಂಗಳೂರು ಹಬ್ಬ”ಕ್ಕೆ* ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಹಬ್ಬ ಆಚರಣೆಗೆ ಪಾಲಿಕೆ ಸಹಕಾರ ನೀಡುವ ಸಂಬಂಧ ಪಾಲಿಕೆ ಕೇಂದ್ರ ಕಛೇರಿ ಮುಖ್ಯ ಆಯುಕ್ತರ ಕಛೇರಿಯಲ್ಲಿ ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಘನತೆ ಹಾಗೂ ಬೆಂಗಳೂರಿನ ಬ್ರಾಂಡ್ ಅನ್ನು ಹೆಚ್ಚಿಸುವ ಸಲುವಾಗಿ ಇದೇ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ಹಬ್ಬವನ್ನು ಆಚರಿಸಲಾಗುತ್ತಿದ್ದು, ಅದಕ್ಕೆ ಬೇಕಾದಂತಹ ಸಹಕಾರವನ್ನು ಪಾಲಿಕೆಯಿಂದ ನೀಡಬೇಕಿದೆ. ಈ ನಿಟ್ಟಿನಲ್ಲಿ ಆಯಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು ಸೂಕ್ತ ಕ್ರಮಗಳನ್ನು ಕೈಗೊಂಡು ಅಗತ್ಯ ಸಹಕಾರವನ್ನು ನೀಡಬೇಕೆಂದು ಸೂಚನೆ ನೀಡಿದರು.
ಬೆಂಗಳೂರು ಹಬ್ಬವನ್ನು 2024ರಿಂದ ಆಯಾ ಖುತುವಿಗೆ ತಕ್ಕಂತೆ ಹಬ್ಬಗಳನ್ನು ಆಚಾರಿಸಲಾಗುತ್ತದೆ. ಬೆಂಗಳೂರು ಹಬ್ಬಕ್ಕೆ ಪ್ರಮುಖ ಸ್ಥಳ, ಜಂಕ್ಷನ್ಗಳು, ಮೇಲುಸೇತುವೆ, ಉದ್ಯಾನವನಗಳು, ಮಾರುಕಟ್ಟೆಗಳನ್ನು ಗುರುತಿಸಿ ಸದರಿ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸಬೇಕು. ಜೊತೆಗೆ ಪಾರಂಪರಿಕ ಕಟ್ಟಡಗಳು ಹಾಗೂ ಪ್ರಮುಖ ಸರ್ಕಾರಿ ಕಛೇರಿಗಳ ಮೇಲೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲು ಸೂಚಿಸಿದರು.
ಬೆಂಗಳೂರು ಹಬ್ಬದ ನಿರ್ದೇಶಕರಾದ ರವಿಚಂದರ್ ಮಾತನಾಡಿ, ಅನ್ ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್ ವತಿಯಿಂದ ಡಿಸೆಂಬರ್ 1 ರಿಂದ 11 ರವರೆಗೆ ಅನ್ ಬಾಕ್ಸಿಂಗ್ ಬಿ.ಎಲ್.ಆರ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಅದನ್ನು 12 ವರ್ಗಗಳಾಗಿ ವಿಂಗಡಿಸಿ 45 ಮಾದರಿಗಳಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಹಬ್ಬದ ಆಚರಿಸುವ ಸಂಬಂದ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗುವುದು. ಬೆಂಗಳೂರು ಹಬ್ಬ ಆಚರಣೆಯ ಕುರಿತು https://habba.unboxingblr.com/ ವೆಬ್ಸೈಟ್ ನಲ್ಲಿ ಸಂಪೂರ್ಣ ವಿವರಗಳನ್ನು ನಾಗರಿಕರು ಪಡೆದುಕೊಂಡು ನೋಂದಣಿಯಾಗಬಹುದಾಗಿದೆ ಎಂದು ತಿಳಿಸಿದರು.
ಓಪನ್ ಸ್ಟ್ರೀಟ್ ಮೇಳ:
ನಗರದಲ್ಲಿ ಆಯ್ದ ಪ್ರಮುಖ 6 ರಸ್ತೆಗಳಲ್ಲಿ ಡಿಸೆಂಬರ್ 9 ಹಾಗೂ 10ನೇ ತಾರೀಖು ಎರಡು ದಿನಗಳ ಓಪನ್ ಸ್ಟ್ರೀಟ್ ಮೇಳವನ್ನು ಆಯೋಜಿಸಲಾಗಿದ್ದು, ಈ ಮೇಳದಲ್ಲಿ ಅಲ್ಪ ಬೆಲೆಯ ಮಾರುಕಟ್ಟೆ ಮಳಿಗೆಗಳು, ಸ್ಟ್ರೀಟ್ ಆರ್ಟಿಸ್ಟ್ಸ್ ಅಲಂಕಾರಗೊಳಿಸುದು, ಬಂಟಿಂಗ್ ಮತ್ತು ಲೈಟಿಂಗ್ ಸೇರಿದಂತೆ ನಾಗರಿಕರನ್ನು ಸೆಳಯಲು ಆಕರ್ಷಕ ರೀತಿಯ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ.
ದಿ ಬಿಗ್ ಫೀಡ್ ಫೆಸ್ಟಿವಲ್:
ಡಿಸೆಂಬರ್ 9 ರಿಂದ 10ನೇ ತಾರೀಖಿನಂದು ಬಿಗ್ ಫೀಡ್ ಫೆಸ್ಟಿವಲ್ ಕಾರ್ಯವನ್ನು ಬೆಂಗಳೂರು ಅರಮನೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದು, ಎರಡು ದಿನಗಳ ಕಾಲ ಸದರಿ ಸ್ಥಳದಲ್ಲಿ ಫುಡ್ ಸ್ಟಾಲ್, ಸಂಗೀತ ಕಾರ್ಯಕ್ರಮ, ಮಾರುಕಟ್ಟೆ ಸ್ಟಾಲ್ಸ್ ಹಾಗೂ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಅಯೋಜಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಎಲ್ಲಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು ಹಾಗೂ ಉಪ ಆಯುಕ್ತರು(ಅಡಳಿತ) ರವರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.