ಹಾವೇರಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆ ನಡೆಯಲಿರೋ ವಲ್ಡ್ ಕಪ್ ಪಂದ್ಯಾವಳಿಗೆ ಹಾವೇರಿಯಲ್ಲಿ ಕ್ರೀಡಾಭಿಮಾನಿಗಳು ತೇರು ಬೀದಿ ಆಂಜನೇಯ ಸ್ವಾಮೀಗೆ ಪೂಜೆ ಸಲ್ಲಿಸಿದರು. ನಗರದ ಆಂಜನೇಯ ಸ್ವಾಮೀಗೆ ಪೂಜೆ ಸಲ್ಲಿಸಿ, ಭಾರತ ಗೆಲ್ಲುವಂತೆ ಪ್ರಾರ್ಥನೆ ಸಲ್ಲಿಸಿದರು. ಭಾರತ ಪರ ಘೋಷಣೆ ಕೂಗಿ, ಜೈಕಾರ ಹಾಕಿದ್ದಾರೆ.
ಜೊತೆಗೆ ವಿರಾಟ್ ಕೋಹ್ಲಿಯ ಅಭಿಮಾನಿ ಪ್ರವೀಣ ಬೆನ್ನಿನ ಹಿಂಭಾಗದಲ್ಲಿ ಹಚ್ಚೆ ಹಾಕಿಕೊಂಡಿದ್ದಾರೆ. ಈ ಭಾರಿ ನಮ್ಮ ಭಾರತ ತಂಡ ವಲ್ಡ್ ಕಪ್ ಗೆದ್ದೆ ಗೆಲ್ಲುತ್ತೆ, ಎಲ್ಲಾ ವಿಭಾಗದಲ್ಲಿ ಉತ್ತಮವಾದ ಪ್ರದರ್ಶನವನ್ನ ಭಾರತ ನೀಡುತ್ತಿದೆ. ಟೀಂ ಇಂಡೀಯಾ ಈ ಭಾರಿ ವಲ್ಡ್ ಕಪ್ ಗೆಲ್ಲುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.