ವಿಶ್ವ ಕಪ್ ನಲ್ಲಿ ಫೈನಲ್ ಪ್ರವೇಶಿಸಿರುವ ಭಾರತದ ಗೆಲುವಿಗಾಗಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ.
ಕಾಂಗರೂ ಪಡೆಯನ್ನ ಕಟ್ಟಿ ಹಾಕಲು ಕ್ರಿಕೆಟ್ ಪ್ರೇಮಿಗಳು ದೇವರ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ. ನಾಳಿನ ಹೈ ವೋಲ್ಟೇಜ್ ವಿಶ್ವ ಕಪ್ ಗಾಗಿ ವಿಶೇಷ ಪೂಜೆ ನಡೆದಿದೆ. ಟೀಮ್ ಇಂಡಿಯಾ ಗೆದ್ದು ಬರಲಿ ಅಂತ ಕ್ರಿಕೆಟ್ ಭಕ್ತರಿಂದ ದೇವರ ಮೊರೆ ಹೋಗಿದ್ದಾರೆ.
ನಗರದ ಪ್ರಸಿದ್ಧ ನಿಮಿಷಾಂಬ ದೇವಾಲಯದಲ್ಲಿ ಫಿನಾಲೆಗೆ ಸ್ಪೆಷಲ್ ಪೂಜೆ ನಡೆದಿದ್ದು, ವಿಶ್ವ ಕಪ್ ನಲ್ಲಿ ಭಾರತದ ಗೆಲುವಿಗಾಗಿ ವಿಶೇಷ ಹೋಮ ನಡೆದಿದೆ. ನಾಳಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿ ಅಂತಾ ಹೋಮ-ಹವನ ನಡೆದಿದೆ.
ರಾಜರಾಜೇಶ್ವರಿನಗರದ ನಿಮಿಷಾಂಭ ದೇಗುಲದಲ್ಲಿ ವಿಶೇಷ ಪೂಜೆ ಹಾಗೂ ಹೋಮ ಮಾಡಿ ಟೀಂ ಇಂಡಿಯಾಗೆ ಅರ್ಚಕರು ಶುಭಕೋರಿದ್ದಾರೆ.
ಗೆದ್ದು ಬಾ ಟೀಂ ಇಂಡಿಯಾ ಅಂತಾ ಪ್ರಾರ್ಥನೆ ಸಲ್ಲಿಸಿದ್ದು, ಚಂಡಿಕಾ ಹೋಮ ಮಾಡೋ ಮೂಲಕ ಟೀಂ ಇಂಡಿಯಾಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.