ಮಂಡ್ಯ: ವಿಪಕ್ಷದವರ ಟೀಕೆ ಜನರ ಅಭಿವೃದ್ಧಿಗೆ ಪೂರಕವಾಗಿ ಇರಬೇಕು ಎಂದು ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಯತೀಂದ್ರ ವರುಣ ಕ್ಷೇತ್ರದ ಮಾಜಿ ಶಾಸಕ, ಅವರ ತಂದೆ ಸಿಎಂ. ಹೀಗಿರುವಾಗ ಆ ಕ್ಷೇತ್ರದ ಕೆಲಸವನ್ನು ನೋಡಿಕೊಂಡರೆ ತಪ್ಪೇನು? ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಹಾಕಿ ಅನ್ನೋದರಲ್ಲಿ ತಪ್ಪೇನು? ಸಾರ್ವಜನಿಕರೇ ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಬೇಕು ಅಂತಾರೆ.
ಕುಮಾರಸ್ವಾಮಿ ಕುಟುಂಬದವರು ಅಧಿಕಾರದಲ್ಲಿದ್ದಾಗ ಏನು ಮಾಡಿಲ್ವೇ? ಮಾಜಿ ಸಿಎಂ ಕುಮಾರಸ್ವಾಮಿಗೆ ಅಧಿಕಾರ ಬಿಟ್ಟು ಇರೋಕೆ ಆಗಲ್ಲ. ಹೆಚ್.ಡಿ.ಕುಮಾರಸ್ವಾಮಿಗೆ ಅಧಿಕಾರ ಕೊಟ್ಟರೆ ನಿಭಾಯಿಸಲು ಆಗಲ್ಲ. ಕುಮಾರಸ್ವಾಮಿ ನೆಮ್ಮದಿಯಿಂದ ಇರಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.