ಬೆಂಗಳೂರು:- ಲುಲು ಮಾಲ್ ಜಮೀನಿನ ಕುರಿತು ಕುಮಾರಸ್ವಾಮಿ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಏನೇನು ಪಟ್ಟಿ ಕೊಡ್ತಾರೆ, ಅದಕ್ಕೆ ಲೆಕ್ಕ ಕೊಡೋಣ. ತಪ್ಪು ಮಾಡಿದ್ದರೆ ಬೇಕಾದರೆ ಗಲ್ಲಿಗೆ ಹಾಕಲಿ ಎಂದರು.
ಜನರೇ ಅವರಿಗೆ ಉತ್ತರ ಕೊಟ್ಟಿದ್ದಾರೆ. ಅವರ ಮಾತು, ಆಚಾರ, ವಿಚಾರಕ್ಕೆ ಉತ್ತರ ನೀಡಿದ್ದಾರೆ. ಇನ್ನೂ ಏನು ಬೇಕಾದರೂ ನಾನು ಉತ್ತರ ಕೊಡುತ್ತೇನೆ. ನಾನು ಮಾಲ್ ಕಟ್ಟಿರುವ ಜಾಗ ಕೇಂದ್ರ ಸರ್ಕಾರ ಒಂದು ಸಂಸ್ಥೆಯದ್ದು. ಅವರು ದಾಖಲೆ ಮಾಡಿ ಟೆಂಡರ್ ಹಾಕಿದ್ದಾರೆ. ಅದನ್ನು ನಮ್ಮ ಸ್ನೇಹಿತರು ತೆಗೆದುಕೊಂಡಿದ್ದರು. ಅದನ್ನು ನಾನು ಅವರ ಬಳಿ ತೆಗೆದುಕೊಂಡಿದ್ದೇನೆ. ಏನಾದರೂ ತಪ್ಪು ಮಾಡಿದ್ದರೆ ಬೇಕಾದರೆ ಗಲ್ಲಿಗೆ ಹಾಕಲಿ. ಅವರಿಗೆ ಇನ್ನೂ ಗೊತ್ತಿಲ್ಲ. ಅವರ ತಂದೆ 10-15 ವರ್ಷದ ಹಿಂದೆಯೇ ತನಿಖೆ ಮಾಡಿಸಿದ್ದಾರೆ” ಎಂದರು
ಎಲ್ಲದಕ್ಕೂ ನಾನು ರೆಡಿ ಇದ್ದೇನೆ. ಈ ಬ್ಲಾಕ್ಮೇಲ್ಗೆ ನಾನು ಹೆದರಲ್ಲ. ಅವರಿಗೆ ಏನು ದಾಖಲೆ ಬೇಕೋ ಕೊಡ್ತೇನೆ. ಆ ಮಾಲ್ ಕಟ್ಟಿದ್ದು ನಾನಲ್ಲ. ಶೋಭಾ ಡೆವಲಪರ್ಸ್ ಕಟ್ಟಿದ್ದು. ಅವರು ಏನೇನ್ ಬಿಲ್ಲು ಕಟ್ಟಿದ್ದಾರೆ, ತೋರಿಸುತ್ತಾರೆ. ತೋರಿಸಿ ಅಂತ ನಾನೇ ಅವರಿಗೆ ಹೇಳ್ತೇನೆ” ಎಂದು ಡಿಕೆಶಿ ತಿಳಿಸಿದರು.