ಮೈಸೂರು: ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡುತ್ತಾ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಶಾಸಕ ಡಾ.ಅಶ್ವತ್ಥ ನಾರಾಯಣ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಶ್ವಥ್ ನಾರಾಯಣ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಲಾಗುತ್ತಿದೆ. ಹುಚ್ಚ ಅಶ್ವತ್ಥ ನಾರಾಯಣ್ ಎಂಬ ಪ್ಲೇ ಕಾರ್ಡ್ ಹಿಡಿಯಲಾಗಿದೆ.
ಅಶ್ವಥ್ ನಾರಾಯಣ್ ರವರು ಡಾ ಯತೀಂದ್ರ ಸಿದ್ದರಾಮಯ್ಯ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ವರ್ಗಾವಣೆ ದಂಧೆ ಇರುವುದು ಬಿಜೆಪಿಯಲ್ಲಿ. ಕಾಂಗ್ರೆಸ್ ಆಗಲಿ ಯತೀಂದ್ರ ಸಿದ್ದರಾಮಯ್ಯರಾಗಲಿ ಯಾವುದೇ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿಲ್ಲ. ಅಶ್ವಥ್ ನಾರಾಯಣ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು ಅದು ಸಿಗಲಿಲ್ಲ. ಹಾಗಾಗಿ ಈ ರೀತಿ ಹೇಳಿಕೆ ನೀಡಿದರೆ ವಿಪಕ್ಷ ನಾಯಕನನ್ನಾಗಿ ಮಾಡುತ್ತಾರೆ ಎಂದು ಲೋಕೇಶ್ ಪಿಯಾ ಹೇಳಿದರು.