ಬೆಂಗಳೂರು :- ಹೈಕೋರ್ಟ್ ಆದೇಶದಂತೆ ಹೆಚ್ಡಿಕೆ ಬಿಡದಿ ಜಮೀನು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಹೈಕೋರ್ಟ್ ಆದೇಶದ ಬಗ್ಗೆ ಸರ್ಕಾರ ಏನು ಮಾಡುತ್ತೆ ಅದನ್ನು ಮಾಡುತ್ತದೆ. ಮಾಜಿ ಸಿಎಂ ಎಂಬ ಕಾರಣಕ್ಕೆ ಮುಲಾಜು ಮಾಡಲ್ಲ, ಸರ್ಕಾರ ಹೈಕೋರ್ಟ್ ಆದೇಶ ಪಾಲನೆ ಮಾಡುತ್ತದೆ. ಆದರೆ, ಯಾವಾಗ ಎಂದು ಹೇಳಲು ಆಗುವುದಿಲ್ಲ ಎಂದರು.
ಕುಮಾರಸ್ವಾಮಿ ನಾನು ಬೇರೆಯವರ ಆಸ್ತಿ ಲೂಟಿ ಮಾಡಿಲ್ಲ ಎನ್ನುತ್ತಾರೆ. ಹಾಗಾದರೆ ಅದರ ಬಗ್ಗೆ ತನಿಖೆ ಮಾಡಿಸಲಿ. ಎಲ್ಲಾ ರಾಜಕಾರಣಿಗಳ ಬಗ್ಗೆ ತನಿಖೆ ಮಾಡಬೇಕೋ ಅಥವಾ ಆಯ್ದ ಕೆಲವರ ಮೇಲೆ ತನಿಖೆ ಮಾಡಬೇಕೋ ಎಂಬುದನ್ನು ಪ್ರಧಾನಿ ಬಳಿ ಹೇಳಿ ತನಿಖೆ ಮಾಡಸಲಿ. ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇದೆ ಎಂದರು. ನಾನು ಅವರ ರೀತಿಯಲ್ಲಿ ಬಿಡದಿಯಲ್ಲಿ ಒತ್ತುವರಿ ಮಾಡಿಲ್ಲ, ಗ್ರ್ಯಾಂಟ್ ಮಾಡಿರುವ ಜಮೀನು ಪಡೆದಿಲ್ಲ. ನಾನು ಜಮೀನನ್ನು ಖರೀದಿ ಮಾಡಿದ್ದೇವೆ. ಯಾವುದೇ ಗ್ರ್ಯಾಂಟ್ ಜಮೀನು ಪಡೆದರೆ ಅಥವಾ ಒತ್ತುವರಿ ಮಾಡಿದರೆ ಅದು ನನ್ನ ಅಪರಾಧ. ಆದರೆ ನಾನು ಯಾವುದೇ ಜಮೀನು ಒತ್ತುವರಿ ಮಾಡಿಲ್ಲ. ನಾನು ಏನಾದರೂ ಒತ್ತುವರಿ ಮಾಡಿದರೆ ಕ್ರಮ ಆಗಲಿ ಎಂದು ಹೇಳಿದರು.