ಬೆಂಗಳೂರು:- ಬಿ.ವೈ.ವಿಜಯೇಂದ್ರ ಅವರಿಗಿಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹತ್ತು ಪಟ್ಟು ಸ್ಟ್ರಾಂಗ್ ಇದ್ದಾರೆ ಎಂದು ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅವರನ್ನು ಒಂದು ಬಾರಿ ಮುಟ್ಟಿದ್ದಕ್ಕೆ ಬಿಜೆಪಿ 66ಕ್ಕೆ ಇಳಿದಿದೆ. ಇನ್ನು ಮುಂದೆ ಅವರ ಹತ್ತಿರಕ್ಕೆ ಬಂದರೂ 33ಕ್ಕೆ ಬಿಜೆಪಿಯವರು ಹೊರಟು ಹೋಗುತ್ತಾರೆ’ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದರು.
ಬಿ.ವೈ.ವಿಜಯೇಂದ್ರ ಅವರು ಯುವ ಘಟಕದ ಅಧ್ಯಕ್ಷರಾಗಿದ್ದರೆ ಸಂತೋಷವಾಗುತ್ತಿತ್ತು. ಅವರ ಸಮಯ ಚೆನ್ನಾಗಿದೆ, ಅವರು ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು.
ಸಿಎಂ ಪುತ್ರ ಯತೀಂದ್ರ ಅವರು ‘ಶ್ಯಾಡೋ ಸಿಎಂ’ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಹೇಗೆ ಆಡಳಿತ ಮಾಡುತ್ತಿದ್ದಾರೆ ನೀವೇ ನೋಡಿದ್ದೀರಿ. 2013ರಿಂದ 2018ರವರೆಗೆ ಹೇಗೆ ಉತ್ತಮ ಆಡಳಿತ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ‘ಶ್ಯಾಡೋ ಸಿಎಂ’ ಯಾವುದೂ ಇಲ್ಲ. ಇದು ಕೆಲವರ ಆರೋಪವಷ್ಟೆ ಎಂದು ಉತ್ತರಿಸಿದರು.