ಗ್ಲೆನ್ ಮೆಕ್ಗ್ರಾತ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ದಾಖಲೆಯನ್ನು ಹೊಂದಿದ್ದಾರೆ. ಐಸಿಸಿ ವಿಶ್ವಕಪ್ 2003 ರ ದಕ್ಷಿಣ ಆಫ್ರಿಕಾದ ಪೊಟ್ಚೆಫ್ಸ್ಟ್ರೂಮ್ನಲ್ಲಿ ನಮೀಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 15 ರನ್ ನೀಡಿ 7 ವಿಕೆಟ್ ಕಿತ್ತು ವಿಶ್ವ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಭಾರತದ ಬೌಲರ್ ಶಮಿ ಸರಿಗಟ್ಟಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಶಮಿ ಬೌಲಿಂಗ್ ಮೋಡಿ ಮಾಡಿದರು. 9.5 ಓವರ್ಗಳಿಗೆ 57 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು. ಜೊತೆಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
7 ವಿಕೆಟ್ ಕಿತ್ತ ಬೌಲರ್ಗಳು
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಂದ್ಯವೊಂದರಲ್ಲೇ 7 ವಿಕೆಟ್ ಕಬಳಿಸಿ ಮಿಂಚಿದ 5 ಆಟಗಾರರಿದ್ದಾರೆ. ಅವರಲ್ಲಿ ಅತಿ ಕಡಿಮೆ ರನ್ಗೆ 7 ವಿಕೆಟ್ ಕಬಳಿಸಿದವರು ಗ್ಲೆನ್ ಮೆಕ್ಗ್ರಾತ್.
ಆಸ್ಟ್ರೇಲಿಯಾದ ಆಂಡಿ ಬಿಚೆಲ್ – 20 ರನ್ 7 ವಿಕೆಟ್ – ಇಂಗ್ಲೆಂಡ್ (ಎದುರಾಳಿ) – 2003, ಮಾ.2
ನ್ಯೂಜಿಲೆಂಡ್ನ ಟಿಮ್ ಸೌಥಿ – 33 ಕ್ಕೆ 7 – ಇಂಗ್ಲೆಂಡ್ (ಎದುರಾಳಿ) – 2015, ಫೆ.20
ವೆಸ್ಟಿಂಡೀಸ್ನ ವಿನ್ಸ್ಟನ್ ಡೇವಿಸ್ – 51 ಕ್ಕೆ 7 – ಆಸ್ಟ್ರೇಲಿಯಾ (ಎದುರಾಳಿ) – 1983, ಜೂ.11
ಭಾರತದ ಮೊಹಮ್ಮದ್ ಶಮಿ – 57 ಕ್ಕೆ 7 – ನ್ಯೂಜಿಲೆಂಡ್ (ಎದುರಾಳಿ) – 2023, ನ.15