ಬೆಂಗಳೂರು:- ಬಿಎಚ್ಎಲ್ ಲೇಔಟ್ನ ಕೃಷ್ಣಪ್ಪ ಗಾರ್ಡನ್ ಬಳಿ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಬರ್ಬರವಾಗಿ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಜರುಗಿದೆ.
ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ತಬ್ರೇಜ್ ಕೊಲೆಯಾದ ವ್ಯಕ್ತಿ, ಶಬ್ಬೀರ್ ಎಂಬಾತನ ಪತ್ನಿಯ ಜತೆ ತಬ್ರೇಜ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಈ ಹಿಂದೆ ಹಲವಾರು ಬಾರಿ ರಾಜಿ ಪಂಚಾಯಿತಿ ನಡೆದಿತ್ತು. ಬುಧವಾರ ಮತ್ತೆ ಸಂಧಾನಕ್ಕೆಂದು ಕರೆದು ತಬ್ರೇಜ್ನ ಶಬ್ಬೀರ್ ಗ್ಯಾಂಗ್ ಕೊಂದಿದೆ ಎಂದ ಆರೋಪ ಕೇಳಿಬಂದಿದೆ.