ವಿಜಯಪುರ: ‘ನಾವು ದಲಿತರು, ನಮಗಾಗಿ ಯಾರೂ ಕೈ ಎತ್ತಿಲ್ಲ. ನಾವು ದಲಿತರಾಗಿದ್ದರೆ ಯಾವುದೇ ರೀತಿಯ ಬೆಳವಣಿಗೆ ಸಾಧ್ಯವಿಲ್ಲ’ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಈ ಮೂಲಕ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಹೈಕಮಾಂಡ್ ನಿರ್ಧಾರಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ದಲಿತರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಸೆಂಬ್ಲಿಯಲ್ಲೂ ನೋಡಿದ್ದೇವೆ, ಲೋಕಸಭೆಯಲ್ಲೂ ನೋಡಿದ್ದೇವೆ. ಅಸೆಂಬ್ಲಿಯಲ್ಲಿ ದೊಡ್ಡದೊಡ್ಡ ಗೌಡರು, ಸಾಹುಕಾರರುಗಳು ಬಂದರು. ಅವರಿಗೆ, ಅವರ ಪರವಾಗಿ ಕೈ ಎತ್ತುತ್ತಲೇ ಇದ್ದೇವೆ. ಕಳೆದ 75 ವರ್ಷಗಳಿಂದ ನಾವು ಕೈ ಎತ್ತಿಕೊಂಡು ಬಂದಿದ್ದೇವೆ. ನಾವು ದಲಿತರು, ನಮಗಾಗಿ ಈ ಜೀವನದಲ್ಲಿ ಯಾರೂ ಕೈ ಎತ್ತಿಲ್ಲ. ಇದು ಬಹಳ ದುಃಖದ ಸಂಗತಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನೇಮಕ ನಾವಂತೂ ಮಾಡಿಲ್ಲ. ಪಕ್ಷದ ಹಿರಿಯರು ಯಾವ ಯಾವುದೋ ಕಾರಣಕ್ಕೆ ಮಾಡಿದ್ದಾರೆ. ಬಹಳ ಯೋಚಿಸಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಗನೇ ಆಗಬೇಕೆಂದು ನೇಮಿಸಿದ್ದಾರೆ. ಇದರಂತೆ ಬಿವೈ ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ವಿಜಯೇಂದ್ರ ಆಗಿರುವುದರಿಂದ ನಮಗೇನೂ ಹೊಟ್ಟೆ ಉರಿ ಇಲ್ಲ ಎಂದು ಅವರು ಹೇಳಿದ್ದಾರೆ.