ಬೆಂಗಳೂರು: ರಾಜ್ಯ ಬಿಜೆಪಿಯ ನೂತನ ಸಾರಥಿಯಾಗಿ ಮರಿ ರಾಜಾಹುಲಿ ಬಿವೈ ವಿಜಯೇಂದ್ರ ಕೇಸರಿ ಸಿಂಹಾಸನದ ಮೇಲೆ ಪಟ್ಟಾಭಿಷಕ್ತರಾಗಿದ್ದಾರೆ. ಬಿಜೆಪಿ ಕಛೇರಿಯಲ್ಲಿ ನಡೆದ ಕಾರ್ಯಕ್ರಮ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಕಮಲ ಪಡೆಯ ಘಟಾನುಘಟನಿ ನಾಯಕರು ಯುವ ನಾಯಕನಿಗೆ ಪಟ್ಟಕಟ್ಟಿ ಆಶಿರ್ವಾದ ಮಾಡಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ ಮಹಿ ಹುಲಿ ಬಿಜೆಪಿ ಘತವೈಭವವನ್ನು ಮರಳಿ ತರುವ ಶಪತ ಮಾಡಿದ್ದಾರೆ. ಆದ್ರೆ ಪದಗ್ರಗಹಣ ಕಾರ್ಯಕ್ರಮದಲ್ಲೇ ಬಂಡಾಯದ ಭಾವುಟ ಹಾರಾಡಿದ್ದು ಬಿಎಲ್ ಸಂತೋಷ್ ಟೀಂ ಗೈರಾಗಿ ಅಸಮಾಧಾನ ಹೊರಹಾಕಿದೆ……
ಮಾಜಿ ಮುಖ್ಯಮಂತ್ರಿ ರಾಜ್ಯ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಭೀಷ್ಮ ಬಿಎಸ್ ಯಡಿಯೂರಪ್ಪ ನವರ ಸುಪುತ್ರ ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಘೋಷಣೆಯಾದ್ಮೇಲೆ ಕಮಲ ಪಡೆಯ ಖದರ್ ಒಮ್ಮಿಂದೊಮ್ಮೆಲೆ ಚೇಂಜ್ ಆಗಿತ್ತು. ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಕುಗ್ಗಿಹೋಗಿದ್ದ ಆತ್ಮವಿಶ್ವಾಸ ಮರಳಿ ಬಂದಿತ್ತು, ಅಂತೆಯೇ ಕಾರ್ಯಕರ್ತರೇ ಪಕ್ಷದ ಜೀವಾಳ ಅಂತ ವಿಜಯೇಂದ್ರ ಸಾರಿ ಹೇಳಿದ್ದರು. ಇಂತಹ ಯುವ ನಾಯಕನಿಗೆ ಇಂದು ಕೇಸರಿ ಸಿಂಹಾಸನದ ಮೇಲೆ ಪಟ್ಟಾಭಿಷೇಕ ಮಾಡಲಾಯಿತು….
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪದಗ್ರಹಣಕ್ಕಾಗಿ ಮಲ್ಲೇಶ್ವರಂ ನ ಬಿಜೆಪಿ ಕಛೇರಿ ನವ ವಧುವಿನಂತೆ ಸಿಂಗಾರಗೊಂಡಿತ್ತು. ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಕಛೇರಿಗೆ ಬಂದ ಅಧ್ಯಕ್ಷರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಯ್ತು. ಮಂಗಳವಾದ್ಯ, ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಹಲವು ವಾದ್ಯಗಳು ಮೇಳೈಕೆಯೊಂದಿಗೆ ಬಿಜೆಪಿ ಕಛೇರಿ ಬಳಿ ನೆರೆದಿದ್ದ ಶಾಸಕರು, ಸಂಸದರು, ಮಾಜಿ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರುಗಳು , ಸಾವಿರಾರು ಕಾರ್ಯಕರ್ತರು ನೂತನ ಅಧ್ಯಕ್ಷರನ್ನು ಬರಮಾಡಿಕೊಂಡ್ರು. ವಿಜಯೇಂದ್ರ ಬಿಜೆಪಿ ಕಛೇರಿ ಗೇಟ್ ಬಳಿ ಬರ್ತಿದ್ದಂತೆ ಗೋಪೂಜೆ ನೆರವೇರಿಸಿದ್ರು. ಆ ನಂತರ ಕಛೇರಿ ಪ್ರಾಂಗಣದಲ್ಲಿ ನಡೆಯುತ್ತಿದ್ದ ದುರ್ಗಾಪೂಜೆ ಪೂರ್ಣಾಹುತಿಯಲ್ಲಿ ಭಾಗಿಯಾಗಿ, ತಂದೆಯವರ ಜೊತೆ ಅಗ್ನಿಕುಂಡಕ್ಕೆ ಪೂರ್ಣಾಹುತಿ ಸಮರ್ಪಿಸಿದ್ರು. ಈ ವೇಳೆ ಅರ್ಚಕರು ನೀವು ಮುಂದಿನ ಮುಖ್ಯಮಂತ್ರಿಯಾಗಿ ರಾಜ್ಯವಾಳಿ ಅಂತ ಆಶೀರ್ವದಿಸಿದ್ರು. ಅರ್ಚಕರು ಆಶೀರ್ವಾದ ಮಾಡ್ತಿದ್ದಂತೆ ಕಾರ್ಯಕರ್ತರು ಶಿಳ್ಳೆ ಚಪ್ಪಾಳೆಗಳ ಮೂಲಕ ಸಂಭ್ರಮಿಸಿದ್ರು….
ದುರ್ಗಾ ಪೂಜೆ ನಂತರ ಬಿಜೆಪಿ ಆಫೀಸ್ ನಲ್ಲಿರುವ ರಾಜ್ಯಾಧ್ಯಕ್ಷರ ಕಛೇರಿಗೆ ತೆರಳಿದ ವಿಜಯೇಂದ್ರ ನಿಕಟಪೂರ್ವ ಅಧ್ಯಕ್ಷ ಕಟೀಲ್ ಅವರಿಂದ ಬಿಜೆಪಿಯ 11ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ರು. ವಿಜಯೇಂದ್ರ ಗೆ ಪಕ್ಷದ ಭಾವುಟ ಕೊಟ್ಟು ತಮ್ಮ ಕುರ್ಚಿಯ ಮೇಲೆ ಕುಳ್ಳಿರಿಸಿ ಸಾಂಕೇತಿಕ ಅಧಿಕಾರ ಹಸ್ತಾಂತರಿಸಿದ್ರು ಕಟೀಲ್. ಇದಾದ್ಮೇಲೆ ವೇದಿಕೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ಸದಾನಂದಗೌಡ, ಈಶ್ವರಪ್ಪ, ಶಂಕರಮೂರ್ತಿ ಸೇರಿದಂತೆ ಘಟಾನುಘಟಿ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು. ಎಲ್ಲಾ ನಾಯಕರು ವಿಜಯೇಂದ್ರ ಗೆ ಪಕ್ಷದ ಧ್ವಜ ಕೊಟ್ಟು ಪಟ್ಟಾಭಿಷೇಕ ಮಾಡಿದ್ರು. ಇದಾದ್ಮೇಲೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಮೋದಿ, ಅಮಿತ್ ಷಾ, ನಡ್ಡಾ ಅವರ ಆದೇಶದಂತೆ ವಿಜಯೇಂದ್ರ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಮುಂದಿನದಿನಗಳಲ್ಲಿ ಅಮಿತ್ ಶಾ ಅವರನ್ನು ಬೆಂಗಳೂರಿಗೆ ಕರೆಸಿ 1 ಲಕ್ಷ ಜನರನ್ನು ಸೇರಿಸಿ ದೊಡ್ಡ ಕಾರ್ಯಕ್ರಮ ಮಾಡಲು ಪ್ಲಾನ್ ಮಾಡಿದ್ದೇವೆ. ವಿಜಯೇಂದ್ರ ಅಧ್ಯಕ್ಷರಾದ ಮೇಲೆ ರಾಜ್ಯಾದ್ಯಂತ ಸಂತೋಷ ಮನೆಮಾಡಿದೆ, ಎಲ್ಲರಲ್ಲೂ ಉತ್ಸಾಹ ಹೆಚ್ಚಾಗಿದೆ ಎಂದ್ರು BSY….
ಈ ವೇಳೆ ಮಾತನಾಡಿದ ಬಿಜೆಪಿಯ ಘಟಾನುಗಟಿ ನಾಯಕರು ಬಿಜೆಪಿಗೆ ಹೊಸ ಉತ್ಸಾಹ ಬಂದಿದ್ದು. ಯುವ ನಾಯಕನಿಗೆ ನಮ್ಮ ನಾಯಕರು ಅವಕಾಶ ಕೊಟ್ಟಿದ್ದಾರೆ ವಿಜಯೇಂದ್ರ ಎಲ್ಲರನ್ನು ಸಮನ್ವಯತೆಯಿಂದ ನಡೆಸಿಕೊಂಡು ಹೋಗಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರ್ತಾರೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ರು…
ಎಲ್ಲಾ ಘಟಾನುಘಟಿಗಳ ಆಶೀರ್ವಾದ ಪಡೆದು ಮಾತನಾಡಿದ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ
ನೀವೆಲ್ಲಾ ನನ್ನ ಮೇಲೆ ವಿಶ್ವಾಸ ಇಟ್ಟೀದ್ದೀರಿ ಅದನ್ನ ಉಳಿದುಕೊಂಡು ಹೋಗ್ತೀನಿ. ನಮ್ಮ ಗುರಿ ಒಂದೇ ಲೋಕಸಭೆಯಲ್ಲಿ 28 ಕ್ಕೆ 28 ಸ್ಥಾನ ಗೆಲ್ಲೋದು, ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ ಅದರ ಸೇಡನ್ನು ಬಡ್ಡಿ ಸಮೇತ ತೀರಿಸ್ತೀನಿ. ರಾಜ್ಯದ ಯಾವ ಕಾರ್ಯಕರ್ತನೂ ತಲೆತಗ್ಗಿಸುವಂತೆ ಮಾಡಲ್ಲ, ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ರಾಜ್ಯದಲ್ಲಿ ಎಲ್ಲಿ ನೋಡಿದ್ರು ಭ್ರಷ್ಟಾಚಾರ, ರಾಜ್ಯದಲ್ಲಿ ಭೀಕರ ಬರಗಾಲ ಇದೆ ಒಬ್ಬ ಸಚಿವರು ಜಿಲ್ಲೆಯಲ್ಲಿ ಬರ ಪ್ರವಾಸ ಮಾಡಿಲ್ಲ.
ಆಡಳಿತ ಪಕ್ಷ ಅಧಿಕಾರ ದರ್ಪದಿಂದ ನಡೆದುಕೊಳ್ತಿದೆ,
ಲೋಕಸಭೆ ಚುನಾವಣೆಯಲ್ಲಿ ಈ ದರ್ಪಕ್ಕೆ ಉತ್ತರ ಕೊಡ್ತೇವೆ. ಪಕ್ಷದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ. ಭ್ರಷ್ಟ ಸರ್ಕಾರಕ್ಕೆ ಪಾಠ ಕಲಿಸಲು ರಸ್ತೆಗಿಳಿದು ಹೋರಾಟ ಮಾಡಿ ಸರ್ಕಾರಕ್ಕೆ ಬುದ್ದಿ ಕಲಿಸ್ತೇನೆ ಅಂತ ಶಪತ ಮಾಡಿದ್ದಾರೆ ಮರಿ ರಾಜಾಹುಲಿ….
ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮದಲ್ಲೇ ಬಣರಾಜಕೀಯದ ಬಂಡಾಯದ ಭಾವುಟ ಹಾರಾಡಿದೆ, ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಗೈರಾದ್ರು. ಯಡಿಯೂರಪ್ಪ ವಿರೋಧಿ ಬಣದ ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಸೋಮಣ್ಣ, ಅರವಿಂದ ಲಿಂಬಾವಳಿ ಸೇರಿದಂತೆ ಹಲವು ನಾಉಕರು ಗೈರಾಗಿ ಬಹಿರಂಗ ಅಸಮಾಧಾನ ಹೊರಹಾಕಿದ್ರು. ನಾಯಕರ ಅಸಮಾಧಾನದ ಬಗ್ಗೆ ಮಾತನಾಡಿದ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡೋದು ನಮ್ಮೆಲ್ಲರ ಗುರಿ. ದೊಡ್ಡ ಪಕ್ಷ ಅಂದ್ಮೇಲೆ ಅಲ್ಲೊಂದು ಇಲ್ಲೊಂದು ಸಮಸ್ಯೆ ಇರುತ್ವೆ, ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮ ಪಕ್ಷಕ್ಕಿದೆ. ಯಾರು ಬಂದಿಲ್ಲ ಅವರನ್ನೆಲ್ಲಾ ಒಪ್ಪಿಸ್ತೇವೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ್ತೀವಿ ಎಂದು ತೇಪೆಹಚ್ಚುವ ಕೆಲಸ ಮಾಡಿದ್ರು ಈಶ್ವರಪ್ಪ….
ಒಟ್ನಲ್ಲಿ ಘಟಾನುಘಟಿ ನಾಯಕರ ಮಾರ್ಗದರ್ಶನ ಆಶೀರ್ವಾದದೊಂದಿಗೆ ಯಡಿಯೂರಪ್ಪ ಸುಪುತ್ರ ಮರಿ ರಾಜಾಹುಲಿ ವಿಜಯೇಂದ್ರ ರಾಜ್ಯ ಕೇಸರಿ ಪಡೆಯ ಸಾರಥಿಯಾಗಿ ಪದಗ್ರಹಣ ಮಾಡಿದ್ದಾರೆ. ಮೊದಲ ದಿನವೇ ಬಿಎಲ್ ಸಂತೋಷ್ ಟೀಂ ಬಂಡಾಯ ಸಾರಿದ್ದು ಇದಕ್ಕೆ ಮದ್ದೆರೆಯುವ ಕೆಲಸ ಮಾಡಬೇಕು ಯುವ ನಾಯಕ. ಪಕ್ಷದಲ್ಲಿರುವ ಸಾಲು- ಸಾಲು ಸಮಸ್ಯೆಗಳ ನಡುವೆ ವಿಜಯೇಂದ್ರ ಪಕ್ಷವನ್ನು ಕಟ್ಟಿಬೆಳೆಸುವುದರ ಜೊತೆ ಲೋಕಸಮರವನ್ನು ಹೇಗೆ ಗೆಲ್ತಾರೆ ಎಂಬುದನ್ನ ಕಾದುನೋಡಬೇಕಿದೆ…..