ವಾಟ್ಸಾಪ್ ಇತ್ತೀಚೆಗೆ ಹೊಸ ಗೌಪ್ಯತೆ ವೈಶಿಷ್ಟ್ಯನ್ನು ಹೊರತಂದಿದೆ. ಅದೇ ಐಪಿ ಪ್ರೊಟೆಕ್ಷನ್ ಫೀಚರ್. ಈ ಫೀಚರ್ ವಾಟ್ಸಾಪ್ ಕರೆಯಲ್ಲಿ ಇರುವ ಇತರರಿಗೆ ನಿಮ್ಮ ಐಪಿ ವಿಳಾಸವನ್ನು ಮರೆ ಮಾಚುತ್ತದೆ. ಈ ವೈಶಿಷ್ಟ್ಯ ಸಕ್ರಿಯವಾಗಿದ್ದಾಗ, ನಿಮ್ಮ ಕರೆಗಳನ್ನು ನೇರವಾಗಿ ಡಿವೈಸ್ ಬದಲಾಗಿ ವಾಟ್ಸಾಪ್ ಸರ್ವರ್ಗಳ ಮೂಲಕ ಕಳುಹಿಸಲಾಗುತ್ತದೆ. ಇದರಿಂದ ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು ಇತರರಿಗೆ ಹೆಚ್ಚು ಕಷ್ಟಕರವಾಗಿಸುತ್ತದೆ. ಪ್ರಸ್ತುತ ಈ ವೈಶಿಷ್ಟ್ಯ ಸೀಮಿತ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲರಿಗೂ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ವಾಟ್ಸಾಪ್ ಕರೆಯಲ್ಲಿ ಇತರರು ಭಾಗವಹಿಸುವವರಿಂದ ನಿಮ್ಮ ಐಪಿ ವಿಳಾಸವನ್ನು ಮರೆಮಾಡುವ ಮೂಲಕ ಇದು ನಿಮ್ಮ ಗೌಪ್ಯತೆಯನ್ನು ರಕ್ಷಿಸುತ್ತದೆ. ಇದು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು ಇತರರಿಗೆ ಹೆಚ್ಚು ಕಷ್ಟಕರವಾಗಿಸುತ್ತದೆ. ನಿಮ್ಮ ವಾಟ್ಸಾಪ್ ಕರೆಗಳ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ನಿಮಗೆ ಚೆನ್ನಾಗಿ ತಿಳಿದಿಲ್ಲದ ಜನರಿಗೆ ನೀವು ಕರೆಗಳನ್ನು ಮಾಡುತ್ತಿದ್ದರೆ ಅಥವಾ ನಿಮ್ಮ ಗೌಪ್ಯತೆಯ ಬಗ್ಗೆ ನೀವು ಕಾಳಜಿ ವಹಿಸುತ್ತಿದ್ದರೆ ಇದು ವಿಶೇಷವಾಗಿ ಮುಖ್ಯವಾದ ವೈಶಿಷ್ಟ್ಯವಾಗಿದೆ. ವಾಟ್ಸಾಪ್ನ ಸರ್ವರ್ಗಳ ಮೂಲಕ ನಿಮ್ಮ ಕರೆಗಳನ್ನು ರೂಟ್ ಮಾಡುವುದರಿಂದ ನಿಮ್ಮ ಕರೆಗಳನ್ನು ಪ್ರತಿಬಂಧಿಸಲು ಇತರ ಜನರಿಗೆ ಹೆಚ್ಚು ಕಷ್ಟವಾಗಬಹುದು. ಯಾಕೆಂದರೆ ಎಲ್ಲಾ ಕರೆಗಳು ಮತ್ತು ಸಂದೇಶಗಳನ್ನು ರಕ್ಷಿಸಲು ವಾಟ್ಸಾಪ್ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಅನ್ನು ಬಳಸುತ್ತದೆ. ಇದಲ್ಲದೆ, ಸೈಬರ್ ದಾಳಿಯಿಂದಲೂ ಇದು ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಯಾಕೆಂದರೆ, ವಾಟ್ಸಾಪ್ನ ಸರ್ವರ್ಗಳು ಅನುಮಾನಾಸ್ಪದ ಚಟುವಟಿಕೆಗಾಗಿ ನಿರಂತರವಾಗಿ ನಿಗಾ ಇಡುತ್ತವೆ.
- ನಿಮ್ಮ ಫೋನ್ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ
- ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ
- ಸೆಟ್ಟಿಂಗ್ಸ್ ಮೇಲೆ ಟ್ಯಾಪ್ ಮಾಡಿ
- ಇಲ್ಲಿ ಪ್ರೈವೆಸಿ ಮೇಲೆ ಟ್ಯಾಪ್ ಮಾಡಿ
- ಅಡ್ವಾನ್ಸ್ಡ್ ಸೆಕ್ಷನ್ನತ್ತ ಸ್ಟ್ರಾಲ್ ಡೌನ್ ಮಾಡಿ
- `ಪ್ರೊಟೆಕ್ಷನ್ ಐಪಿ ಅಡ್ರೆಸ್ ಇನ್ ಕಾಲ್’ ಎಂಬುದನ್ನು ಟ್ಯಾಪ್ ಮಾಡಿ
- ಸ್ವಿಚ್ನಲ್ಲಿ ಟಾಗಲ್ ಮಾಡಿ