ಬೆಂಗಳೂರು:– ಆನೇಕಲ್ ನಲ್ಲಿ ಪೊಲೀಸ್ ಇಲಾಖೆಯಿಂದ ವಿನೂತನ ಪ್ರಯತ್ನ ನಡೆದಿದೆ. ಎಸ್ಪಿ ನೇತೃತ್ವದಲ್ಲಿ ಪಬ್ಲಿಕ್ ಜೊತೆ ಪೊಲೀಸ್ ಬೀಟ್ ನಡೆದಿದೆ.
ಚಂದಾಪುರ ಸರ್ಕಲ್ ನಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಪೆಷಲ್ ಬೀಟ್ ನಡೆದಿದ್ದು, ಬೀದಿ ಬದಿ ಅಂಗಡಿ, ಸಂತೆ ಚಿಕನ್ ಮಾರ್ಕೆಟ್, ಆಟೋ ಸ್ಟ್ಯಾಂಡ್ ಗೆ ವಿಸಿಟ್ ಕೊಟ್ಟಿದ್ದಾರೆ. ಪ್ರತಿಯೊಬ್ಬರ ಬಳಿ ಪುಂಡರ ಹಾವಳಿ, ಹಫ್ತಾ ವಸೂಲಿ ಗೂಂಡಾಗಿರಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಲಾ ಅಂಡ್ ಅರ್ಡರ್ ಜೊತೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆಯು ಮಾಹಿತಿ ಸಂಗ್ರಹಿಸಲಾಗಿದ್ದು, ಪಾರ್ಕಿಂಗ್ ಸಮಸ್ಯೆ, ಬೀದಿ ದೀಪ, ತಂಗುದಾಣ ವಾಕಿಂಗ್ ಪಾತ್ ಬಗ್ಗೆಯು ಸ್ಪಂದನೆ ವ್ಯಕ್ತವಾಗಿದೆ. ಸಾರ್ವಜನಿಕರ ಬಳಿಗೆ ಪೊಲೀಸ್ ಇಲಾಖೆ ನಡಿಗೆ ಮೂಲಕ ಸಮಸ್ಯೆ ಆಲಿಸಿದ್ದಾರೆ.
ಆನೇಕಲ್ ಉಪವಿಭಾಗದ ಇನ್ಸ್ಪೆಕ್ಟರ್ ಗಳು ಪೊಲೀಸ್ ಸಿಬ್ಬಂದಿ ಭಾಗಿಯಾಗಿದರು. ವಿಶೇಷ ಪೊಲೀಸ್ ಬೀಟ್ ಗೆ ಸಾರ್ವಜನಿಕರ ಪ್ರಶಂಸೆ ವ್ಯಕ್ತವಾಗಿದೆ.