ಬೆಂಗಳೂರು:– ಕಳೆದ ಹಲವು ವರ್ಷಗಳಿಂದ ನಾನು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಅದರಂತೆ ಈ ಬಾರಿಯೂ ಆಚರಿಸದಿರಲು ನಿರ್ಧರಿಸಿದ್ದೇನೆ.
ಇದೇ ತಿಂಗಳ 22 ರಂದು ನನ್ನ ಹುಟ್ಟು ಹಬ್ಬವಿದೆ..ಕೆಲವರು ನನ್ನ ಹುಟ್ಟು ಹಬ್ಬ ಆಚರಿಸಲು ತಯಾರಿ ತಯಾರಿ ನಡೆಸಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.ಆ ದಿನದಂದು ನಾನು ಕಲಬುರಗಿ ಬೆಂಗಳೂರು ಎರಡೂ ಕಡೆ ಲಭ್ಯವಿರುವುದಿಲ್ಲ.
ನನ್ನ ಬರ್ತ್ ಡೇ ಆಚರಿಸಬೇಕೆಂದು ಶ್ರಮ ಹಾಕಬೇಡಿ.ಬದಲಾಗಿ ನಿಮ್ಮ ಪರಿಶ್ರಮ ಬಡಜನರ ಹಿತಕ್ಕಾಗಿ ಇರಲಿ. ಹೀಗಂತ ಟ್ವೀಟ್ ಮೂಲಕ ಅಭಿಮಾನಿಗಳಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ..