ಚಿತ್ರದುರ್ಗ: ಭಾರತ ಕ್ರಿಕೆಟ್ ತಂಡಕ್ಕೆ ಮಹೇಂದ್ರಸಿಂಗ್ ಧೋನಿ ಬಳಿಕ ರೋಹಿತ್ ನಾಯಕತ್ವ ವಹಿಸಿಕೊಂಡು ಹಿಟ್ ಮ್ಯಾನ್ ಆಗಿರುವಂತೆ ಬಿಜೆಪಿಗೂ ವಿಜಯೇಂದ್ರ (BY Vijayendra) ಹಿಟ್ ಮ್ಯಾನ್ (Hit Man) ಆಗಲಿದ್ದಾರೆ ಎಂದು ಬಿಜೆಪಿ (BJP) ಶಾಸಕ ಶ್ರೀರಾಮುಲು (B Sriramulu) ಭವಿಷ್ಯ ನುಡಿದಿದ್ದಾರೆ. ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿವೈ ವಿಜಯೇಂದ್ರ ಪರ ಬ್ಯಾಟ್ ಬೀಸಿದರು.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ವಿಧಾನಸಭೆ ಚುನಾವಣೆ (Assembly Election) ಸೋತ ಬಳಿಕ ಪಕ್ಷವು ವಿಜಯೇಂದ್ರಗೆ ಅವಕಾಶ ನೀಡಿದೆ. ಹೀಗಾಗಿ 30 ವರ್ಷಗಳಿಂದ ನಾನು ವಿಜಯೇಂದ್ರ ಅವರನ್ನು ನೋಡಿದ್ದು, ಯುವಕರಿಗೆ ಭವಿಷ್ಯದಲ್ಲಿ ಅವಕಾಶ ಸಿಗಬೇಕು. ಹೀಗಾಗಿ ಪಕ್ಷವು ಹಂತ ಹಂತವಾಗಿ ಗುರುತಿಸಿ ಅವಕಾಶ ನೀಡಿದೆ ಹೊರತು ಬಿಎಸ್ ಯಡಿಯೂರಪ್ಪ (BS Yediyurappa) ಅವರ ಮಗ ಅಂತ ಜವಾಬ್ದಾರಿ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.