ತುಮಕೂರು: “ಯಾವುದೋ ನಾಲ್ಕು ಬೈ ಎಲೆಕ್ಷನ್ ಗೆಲಿಸಿದ ಕ್ಷಣಕ್ಕೆ ದೊಡ್ಡ ಸಂಘಟನಾ ಚತುರ ಅಂತಾ ಸರ್ಟಿಫಿಕೇಟ್ ಕೊಡೋಕೆ ಆಗಲ್ಲಾ..” -ಇದು ಬಿವೈ ವಿಜಯೇಂದ್ರ ಅವರು ಸಂಘಟನಾ ಚತುರ ಎಂಬ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂಬ ಅಭಿಪ್ರಾಯಕ್ಕೆ ಸಂಬಂಧಿೈಸಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಆಡಿರುವ ವ್ಯಂಗ್ಯದ ಮಾತು. ಸುದ್ದಿಗಾರರ ಪ್ರಶ್ನೆಗಳೆಗೆ ಪ್ರತಿಕ್ರಿಯಿಸಿದ ಅವರು,
ಇತ್ತೀಚಿನ ಬೈಎಲೆಕ್ಷನ್ ಗಳು ಯಾವ ಆಧಾರದ ಮೇಲೆ ಗೆಲುತ್ತೆ, ಸೋಲುತ್ತೆ ಅಂತಾ ಗೊತ್ತಿದೆ. ಗುಂಡ್ಲುಪೇಟೆ, ನಂಜನಗೂಡು ಬೈಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆದ್ರು, 6 ತಿಂಗಳಿಗೆ ಸೋತ್ರು. ಬೈಲೆಕ್ಷನ್ ರಿಸಲ್ಟ್ ತರೋಕೆ ಮಾನದಂಡಗಳು ಬೇರೆ ಬೇರೆ ಇರುತ್ತೆ. ಹಾಗಾಗಿ ಬೈಎಲೆಕ್ಷನ್ ಗೆದ್ದಾಕ್ಷಣಕ್ಕೆ ಮಹಾ ಸಂಘಟನಾ ಚತುರರು ಅಂತಾ ಸರ್ಟಿಫಿಕೇಟ್ ಕೊಡೋಕೆ ಆಗೊಲ್ಲ ಎಂದು ಅಭಿಪ್ರಾಯಪಟ್ಟರು.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಬಿಜೆಪಿಯಲ್ಲಿ ಬಹಳ ಸಮಯದಿಂದ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಸ್ಥಾನ ನೆನೆಗುದಿಗೆ ಬಿದಿತ್ತು. ಏನೋ ಕೇಂದ್ರದ ಬಿಜೆಪಿ ಮುಖಂಡರಿಗೆ ಜ್ಙಾನೋದಯ ಆಗಿ ಅಧ್ಯಕ್ಷ ಸ್ಥಾನ ತುಂಬಿದ್ದಾರೆ. ಅದು ವಿಜಯೇಂದ್ರ ಅವರನ್ನ ಆ ಸ್ಥಾನದಲ್ಲಿ ತಂದಿದ್ದಾರೆ. ವಿಜಯೇಂದ್ರ ಅವರನ್ನ ತಂದಿರೋ ಜೊತೆಗೆ ಆ ಪಕ್ಷದ ಅಸಮಾಧಾನ ಕೂಡ ಆಚೆ ಬರ್ತಾ ಇದೆ. ಮುಂದೆ ಕಾದು ನೋಡಬೇಕು ಎಂದರು.