ಬೆಂಗಳೂರು: ಕೊರೊನಾ ಮೇಲಿಂದ ಮೇಲೆ ಒಕ್ಕರಿಸಿದ ಕಾರಣ ಜನ ಕೆಲ ವರ್ಷದಿಂದ ಜನ ಪಟಾಕಿ ಸಹವಾಸಕ್ಕೆ ಹೋಗಿರ್ಲಿಲ್ಲ. ಸರ್ಕಾರ ಸಹ ಹಾನಿಕಾರಕ ಪಟಾಕಿಯನ್ನ ಬ್ಯಾನ್ ಮಾಡಿ ಆದೇಶಿಸಿತ್ತು. ಆದ್ರೀ ಬಾರಿ ಮುಕ್ತ ದೀಪಾವಳಿಗೆ ಅವಕಾಶ ಸಿಕ್ಕಿತ್ತು. ಇದ್ರಿಂದ ಜನ ಕಳೆದ ಎರಡು ವರ್ಷದ ಪಟಾಕಿಯನ್ನೂ ಸೇರಿಸಿ ಸಿಡಿಸಿದ್ದಾರೆ. ಇದ್ರಿಂದ ನಗರದ ಮಾಲಿನ್ಯ ದುಪ್ಪಟ್ಟು ಆಗಿ ಏರಿಕೆಯಾಗಿದೆ..ಇದರಿಂದ ದೀಪಾವಳಿ ಹಬ್ಬದ ಪಟಾಕಿ ಸಂಭ್ರಮ ಮಹಾನಗರಕ್ಕೆ ಮಾರಕವಾಗಿದೆ. ಹಾಗಾದ್ರೆ ನಗರದಲ್ಲಿ ಪಟಾಕಿಯಿಂದ ಆದ ಮಾಲಿನ್ಯವೆಷ್ಟು. ತೋರಿಸ್ತೀವಿ ನೋಡಿ
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಸಿಲಿಕಾನ್ ಸಿಟಿ ಬೆಂಗಳೂರಿಗೆ ಗಾರ್ಬೇಜ್ ಸಿಟಿ, ಗುಂಡಿ ಸಿಟಿ, ಜೊತೆಗೆ ಮಾಲಿನ್ಯಕಾರಕ ಸಿಟಿ ಅನ್ನೊ ಅಪಖ್ಯಾತಿಯೂ ಇದೆ..ನಗರದಲ್ಲಿ ಹೆಚ್ಚಾಗ್ತಿರೋ ಮಾಲಿನ್ಯ ನಿಯಂತ್ರಣ ಮಾಡೋಕೆ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ದೆಹಲಿಯಂತೆ ಬೆಂಗಳೂರು ಮಾಲಿನ್ಯ ನಗರ ಆಗಬಾರದು ಅಂತ ನಾನಾ ಪ್ರಯತ್ನ ಮಾಡಲಾಗ್ತಿದೆ..ಆದ್ರೆ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ವರ್ಷಪೂರ್ತಿ ನಿಯಂತ್ರಣ ಮಾಡಿದ್ದು ದೀಪಾವಳಿ ವೇಳೆ ನೀರಲ್ಲಿ ಹೋಮ ಮಾಡಿದಂತಾಗಿದೆ. ..ದೀಪಾವಳಿ ವೇಳೆ ನಗರದ ಮಾಲಿನ್ಯ ಗರಿಷ್ಠ ಮಟ್ಟ ತಲುಪಿದೆ ಕಳೆದ ಮೂರು ದಿನದಿಂದ ನಗದಲ್ಲಿ ಸಿಡಿಸಿದ ಪಟಾಕಿ ನಗರಕ್ಕೆ ಮಾಲಿನ್ಯಕ್ಕೆ ಕಾರಣವಾಗಿದೆ. .
ಹೌದು. ಕಳೆದ ಎರಡು ವರ್ಷ ಹಿಂದೆ ಕೊರೊನಾ ಕಾರಣ ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸಲು ಅನುಮತಿ ಇರಲಿಲ್ಲ. ಹಾಗಾಗಿ ಪಟಾಕಿ ಮಾಲಿನ್ಯ ಕಡಿಮೆಯಿತ್ತು.ಆದ್ರಿಂದಾಗಿ ಕಳೆದ ವರ್ಷ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ ಶೇ.54.8 ರಷ್ಟಿತ್ತು.ಈ ಬಾರಿ ಅನೇಕಲ್ ಬಳಿ ಪಟಾಕಿ ದುರಂತದಿಂದ್ಲೂ ಸಹ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿತ್ತು.ಆದ್ರೂ ಪಟಾಕಿ ಬ್ಯಾನ್ ಅಂತ ಹೇಳಿದ್ರು ಸರ್ಕಾರದ ಮಾತು ಕೇಳದ ಬೆಂಗಳೂರು ಜನ ಸಿಕ್ಕಪಟ್ಟೆ ಪಟಾಕಿ ಹಚ್ಚಿ ದೀಪಾವಳಿ ಆಚರಿಸಿದ್ದಾರೆ. ಈ ಪಟಾಕಿ ಬಾಂಬ್ಗಳ ಆರ್ಭಟದಿಂದ ಮತ್ತೆ ನಗರದ ವಾತಾವರಣ ಸಂಪೂರ್ಣವಾಗಿ ಹಾಳಾಗಿದೆ. ಕಳೆದ ಮೂರು ದಿನದಿಂದ ಜನ ಮನಸೋ ಇಚ್ಚೆ ಪಟಾಕಿ ಸಿಡಿಸಿದ್ದಾರೆ. ಹೀಗಾಗಿ ಪಟಾಕಿ ಸಿಡಿತದಿಂದ ನಗರದಲ್ಲಿ ವಾಯು ಗುಣಮಟ್ಟದ ಸೂಚ್ಯಂಕ ಪ್ರಮಾಣ ಶೇ.100 ರಷ್ಟು ಏರಿಕೆಯಾಗಿದೆ. ಅಂದರೆ ಕಳೆದ ದೀಪಾವಳಿಗೆ ಹೋಲಿಸಿದರೆ ಈ ಬಾರಿ ವಾಯು ಮಾಲಿನ್ಯ ತೀವ್ರಗತಿಯಲ್ಲಿ ಹೆಚ್ಚಿದೆ..
ಪ್ರದೇಶ – ಹಬ್ಬಕ್ಕೂ ಮೊದಲು – ಹಬ್ಬದ ವೇಳೆ ಮಾಲಿನ್ಯ ಪ್ರಯಾಣ ಎಷ್ಟೆಷ್ಟು ಜಾಸ್ತಿ..
-ಸಿಲ್ಕ್ ಬೋರ್ಡ್ ಜಂಕ್ಷನ್: AQI 68 ರಿಂದ 175 AQI
-ಹೆಬ್ಬಾಳ: AQI 76 ರಿಂದ 176 AQI
-ಮೆಜೆಸ್ಟಿಕ್: AQI 67 ರಿಂದ 101AQI
-ಜಯನಗರ: AQI 105 ರಿಂದ 282 AQI
-ನಿಮ್ಹಾನ್ಸ್: 51 AQI ರಿಂದ 101 179AQI
ಪೀಣ್ಯ. 80 ರಿಂದ 108 ಕ್ಕೆ ತಲುಪಿದೆ
ದೀಪಾವಳಿ ವೇಳೆ ನಗರದ ವಸತಿ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ನಗರದ ಹಲವು ಕಡೆ ನಿರ್ಮಿಸಲಾದ ವಾಯು ಮಾಲಿನ್ಯ ಗುಣಮಟ್ಟ ಮಾಪಕನ ಕೇಂದ್ರ ಗಳು ಮಾಲಿನ್ಯ ಕುರಿತು ದತ್ತಾಂಶಗಳನ್ನ ಸಂಗ್ರಹಿಸಿವೆ. ಸರ್ಕಾರ ರಾತ್ರಿ 6 ಗಂಟೆಯಿಂದ 10 ವರಿಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಿತ್ತು.ಆದ್ರೂ ನಗರದಲ್ಲಿ ಅವಧಿ ಮೀರಿ ಪಟಾಕಿ ಸಿಡಿಸಿದ ಪರಿಣಾಮ ವಾಯುಮಾಲಿನ್ಯ ಮಿತಿ ಮೀರಿದೆ. ಸರ್ಕಾರದ ವೈಫಲ್ಯದಿಂದ್ಲೇ ಮಾಲಿನ್ಯ ಹೆಚ್ಚಾಗಿದೆ ಅಂತ ಸಾಮಾಜಿಕ ಕಾರ್ಯಕರ್ತರು ಆರೋಪ ಮಾಡ್ತಿದ್ದಾರೆ
ಒಟ್ಟಿನಲ್ಲಿ ಮಹಾನಗರದಲ್ಲಿ ಹೆಚ್ಚಾಗ್ತಿರೋ ವಾಹನದಟ್ಟನೆ ಕಾರ್ಖನೆಗಳಿಂದ ಬರುವ ಹಾಗೆಯಿಂದ ಈಗಾಗಲೇ ನಗರದ ಮಾಲಿನ್ಯ ಹಾಳಾಗ್ತಿದೆ. ಇದಕ್ಕೆ ಸರ್ಕಋ ಪರಿಸರ ಉಳಿಸೋ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಇಲ್ಲದ್ರೆ ಬೆಂಗಳೂರು ದೆಹಲಿಯಂತೆ ವಿಷಗಾಳಿಯಿಂದ ತತ್ತರಿಸೋದು ಅಂತೂ ಗ್ಯಾರಂಟಿ .