‘ಸಜನಿ’ (Sajani) ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ (Sandalwood) ಪಾದಾರ್ಪಣೆ ಮಾಡಿದ ನಟಿ ಶರ್ಮಿಳಾ ಮಾಂಡ್ರೆ ಇದೀಗ ತಮಿಳು ಸಿನಿಮಾವೊಂದಕ್ಕೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ. ಕನ್ನಡದ ನಿರ್ದೇಶಕ ವಿನಯ್ ಭಾರದ್ವಾಜ್ ನಿರ್ದೇಶನದ ಚಿತ್ರಕ್ಕೆ ಶರ್ಮಿಳಾ ಸಾಥ್ ನೀಡಿದ್ದಾರೆ
ಮಲೇಷಿಯಾ ಮೂಲದ ಪುನ್ನಗೈ ಪೂ ಗೀತಾ ನಿರ್ಮಾಣದ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಶರ್ಮಿಳಾ (Sharmiela Mandre) ಹೊತ್ತಿದ್ದಾರೆ. ಕನ್ನಡದ ‘ಮುಂದಿನ ನಿಲ್ದಾಣ’ ಚಿತ್ರ ನಿರ್ದೇಶಿಸಿದ್ದ ವಿನಯ್ ಭಾರದ್ವಾಜ್ ತಮಿಳಿನ ‘ಸಿಲ್ ನೋಡಿಗಳಿಲ್’ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಲಂಡನ್ನಲ್ಲಿ ವಾಸವಿರುವ ಗಂಡ-ಹೆಂಡತಿ ನಡುವೆ ಮತ್ತೊಬ್ಬ ಯುವತಿಯ ಆಗಮನವಾಗುತ್ತದೆ. ಅಲ್ಲೊಂದು ಕೊಲೆ ಕೂಡ ಆಗುತ್ತದೆ. ಈ ಕೊಲೆ ಮಾಡಿದ್ದು ಯಾರು? ಎಂಬ ಕುತೂಹಲಕಾರಿ ಅಂಶಗಳು ನಮ್ಮ ಚಿತ್ರದಲ್ಲಿದೆ. ‘ಸಿಲ್ ನೋಡಿಗಳಿಲ್’ ಎಂದರೆ ಕೆಲವೇ ಕ್ಷಣಗಳಲ್ಲಿ ಎಂದು ಅರ್ಥ.
ಸದ್ಯ ತಮಿಳಿನಲ್ಲಿ ಈ ಚಿತ್ರ ನವೆಂಬರ್ 24ರಂದು ರಿಲೀಸ್ ಆಗುತ್ತಿದೆ. ನಂತರದ ದಿನಗಳಲ್ಲಿ ಕನ್ನಡದಲ್ಲಿ ನಿರ್ಮಿಸುವ ಯೋಜನೆ ಇದೆ ಎಂದು ನಟಿ ಶರ್ಮಿಳಾ ತಿಳಿಸಿದ್ದಾರೆ