ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ತನಿಖೆ ಕೈಗೊಂಡಿರುವ CID ಎಲ್ಲಾ ಠಾಣೆಯ ಫೈಲ್ ಗಳನ್ನ ತರಿಸಿಕೊಂಡು ಮಾಹಿತಿ ಕಲೆಹಾಕ್ತಿದೆ..
ಇವತ್ತೂ ಸಹ ಯಾದಗಿರಿ ಜಿಲ್ಲೆಯಲ್ಲಿ ದಾಖಲಾದ ಐದು ಪ್ರಕರಣದ ದಾಖಲೆಗಳನ್ನ ಠಾಣಾಧಿಕಾರಿಗಳು CID ಕಚೇರಿಗೆ ತಂದು ಒಪ್ಪಿಸಿದ್ರು ಅದೇ ರೀತಿಯಾಗಿ ಅಫಜಲಪುರ ಠಾಣೆಯ ದಾಖಲೆ ಪತ್ರಗಳನ್ನ CPI ಪಂಡಿತ್ ಸಗರ್ ತಂದು CID ಸುಪರ್ದಿಗೆ ನೀಡಿದ್ರು..