ಬೆಂಗಳೂರು: ಅಜಾಗರೂಕತೆ ಪರಿಣಾಮ ಬೆಳಕಿನ ಹಬ್ಬ ದೀಪಾವಳಿಯಂದು ಹಲವರ ಬಾಳಲ್ಲಿ ಕತ್ತಲು ಆವರಿಸುವ ಸ್ಥಿತಿ ಏರ್ಪಟ್ಟಿದೆ. ಬೆಂಗಳೂರಿನ (Bengaluru Deepavali) 25 ಕ್ಕೂ ಹೆಚ್ಚು ಮಂದಿ ಮಿಂಟೋ, ನಾರಾಯಣ ನೇತ್ರಾಲಯ ಸೇರಿದ್ದಾರೆ.
ಇದುವರೆಗೆ 26 ಮಂದಿ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿ ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿದ್ದಾರೆ. ಇದರಲ್ಲಿ 13 ಮಂದಿ ಮಕ್ಕಳಿದ್ದಾರೆ. 5 ರೋಗಿಗಳ ಕಣ್ಣಿಗೆ ಗಂಭೀರ ಗಾಯಗಳಾಗಿವೆ.
ಮಹಿಳೆಯರಿಗೆ ಗುಡ್ ನ್ಯೂಸ್: ಶಕ್ತಿ ಯೋಜನೆಯ ಪ್ರಯಾಣಕ್ಕೆ ಹೊಸ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ!
ಬೇರೆಯವರು ಪಟಾಕಿ ಹೊಡೆಯುವುದನ್ನು ನೋಡಲು ಹೋಗಿ ಗಾಯಗೊಂಡವರ ಸಂಖ್ಯೆಯೇ ಹೆಚ್ಚಿದೆ. ಹಸಿರು ಪಟಾಕಿಗೆ ಮಾತ್ರ ಅನುಮತಿ ಇದ್ದರೂ ಬೆಂಗಳೂರಿನಲ್ಲಿ ಢಂ ಢಂ ಸದ್ದು ಹೆಚ್ಚು ಕೇಳಿಬಂತು. ಪರಿಣಾಮ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಿದೆ.
ಅತಿ ಹೆಚ್ಚು ಅಂದರೆ ಜಯನಗರದಲ್ಲಿ 189 ಎಕ್ಯೂಐ ದಾಖಲಾಗಿದೆ. ಅತ್ತ ದೆಹಲಿವಾಸಿಗಳ ನಿರ್ಲಕ್ಷ್ಯದ ಕಾರಣ ಮತ್ತೆ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿದೆ. ಜನ ನಿಷೇಧ ಉಲ್ಲಂಘಿಸಿ ಮತಾಪು ಸಿಡಿಸಿದ್ದಾರೆ. ಪರಿಣಾಮ ದೆಹಲಿ-ಎನ್ಸಿಆರ್ನಲ್ಲಿ ಹೊಗೆ ಆವರಿಸಿದೆ