ಸ್ಯಾಂಡಲ್ವುಡ್ ನಟಿ ಅಮೂಲ್ಯ (Amulya) ಮನೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅವಳಿ ಮಕ್ಕಳ ಜೊತೆ ಅಮೂಲ್ಯ ಗ್ರ್ಯಾಂಡ್ ಆಗಿ ಹಬ್ಬ ಆಚರಣೆ ಮಾಡಿದ್ದಾರೆ. ಹಬ್ಬದ ಸುಂದರ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ
ಬೇಡಿಕೆ ಇದ್ದಾಗಲೇ ಹಸೆಮಣೆ ಏರಿದ್ದ ಚೆಲುವೆ ಅಮೂಲ್ಯ ಈಗ ಮದುವೆ, ಮಕ್ಕಳು, ಸಂಸಾರ ಅಂತ ಅಪ್ಪಟ ಗೃಹಿಣಿಯಾಗಿದ್ದಾರೆ. ಯಾವುದೇ ಹಬ್ಬವಿದ್ದರೂ ಕೂಡ ಮನೆಯಲ್ಲಿ ಸೆಲೆಬ್ರೇಶನ್ ಜೋರಾಗಿಯೇ ಇರುತ್ತದೆ. ಜೊತೆಯೇ ಚೆಂದದ ಫೋಟೋಶೂಟ್ ಕೂಡ ನಟಿ ಶೇರ್ ಮಾಡುತ್ತಾರೆ.
ಬಿಳಿ ಬಣ್ಣದ ಉಡುಗೆಯಲ್ಲಿ ಅಮೂಲ್ಯ ಕಂಗೊಳಿಸಿದ್ರೆ, ಅವರ ಅವಳಿ ಮಕ್ಕಳು ಕೆಂಪು ಬಣ್ಣ ದಿರಿಸಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಬ್ಯಾಕ್ಗ್ರೌಂಡ್ನಲ್ಲಿ ಕಲರ್ಫುಲ್ ಲೈಟ್ನಲ್ಲಿ ನಡುವೆ ಅಮೂಲ್ಯ ಮಿಂಚಿದ್ದಾರೆ.