ಬೆಂಗಳೂರು:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ. ಲೊಕ್ಯಾಂಟೋ ಆ್ಯಪ್ ಮುಖಾಂತರವೇ ಈತನ ಫುಲ್ ಟೈಂ ಬ್ಯೂಸಿನೆಸ್ ನಡೆಯುತ್ತಿತ್ತು.
ಹೌದು, ಲೊಕ್ಯಾಂಟೋ ಆಪ್ ಮುಖಾಂತರ ಹುಡುಗಿಯರನ್ನ ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ ಆರೋಪಿಯು, ಸುದ್ಗುಂಟೆಪಾಳ್ಯದಲ್ಲಿ ಬಂಧನವಾಗಿ ಜೈಲಿನಲ್ಲಿದ್ದಾನೆ. ಹೊರರಾಜ್ಯದಿಂದ ಕೆಲಸ ಅರಸಿ ಬರುವ ಹುಡುಗೀಯರನ್ನೇ ಈತ ಟಾರ್ಗೆ್ಟ್ ಮಾಡುತ್ತಿದ್ದ. ಬಾಡಿಗೆ ಮನೆ ಮಾಡಿಸಿ ಹುಡುಗೀರನ್ನ ಇರಿಸುತ್ತಿದ್ದ. ಜೈಲಿನಲ್ಲಿದ್ದುಕೊಂಡೇ ವಾಟ್ಸಪ್ ಕಾಲ್ ಮೂಲಕ ಗಿರಾಕಿಗಳನ್ನ ಸಂಪರ್ಕಿಸುತ್ತಿದ್ದ. ನಂತರ ಹುಡುಗೀಯರ ಲೊಕೇಷನ್ ಕಳಿಸಿ ಗೂಗಲ್ ಪೇ ಮಾಡಿಸಿಕೊಳ್ತಿದ್ದ. ಹುಳಿಮಾವು ಬಳಿ ಇರುವ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ.
ಮಂಜುನಾಥ್@ ಸಂಜು ಎಂಬಾತನಿಂದ ಕೃತ್ಯ ನಡೆದಿದೆ. ಸದ್ಯ ಜೈಲಿನಲ್ಲಿಯೇ ಮಂಜುನಾಥ್ @ಸಂಜು ಇದ್ದು, ಸುದ್ಗುಂಟೆಪಾಳ್ಯದಲ್ಲಿ ಕೂಡ ಲೊಕ್ಯಾಂಟೋ ಆ್ಯಪ್ ಮೂಲಕ ವೇಶ್ಯಾವಾಟಿಕೆ ಹಿನ್ನಲೆ ಸಿಕ್ಕಿಬಿದ್ದಿದ್ದ. ಸದ್ಯ ಜೈಲಿನಲ್ಲಿದ್ದುಕೊಂಡು ಹುಳಿಮಾವು ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕಯನ್ನ ಮೇಂಟೇನ್ ಮಾಡ್ತಿದ್ದ. ಅರುಣ್@ಹೊಟ್ಟೆ , ರಾಜೇಶ್@ರಾಜು ,ರಾಘವೇಂದ್ರ ಹಾಗು ದರ್ಶನ್ ಎಂಬುವವರು ವೇಶ್ಯಾವಾಟಿಕೆಗೆ ಸಹಕಾರ ನೀಡ್ತಿದ್ದರು. ಹಿನ್ನಲೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಸಿಸಿಬಿ ದೂರು ದಾಖಲಿಸಿದರು.
ಸಂಜು ಬಿಟ್ಟು ಉಳಿದವರನ್ನ ವಿಚಾರಣೆ ಸಿಸಿಬಿ ವಿಚಾರಣೆ ಮಾಡುತ್ತಿದೆ. ಬಾಡಿ ವಾರೆಂಟ್ ಪಡೆದು ಮಂಜುನಾಥ್ ನನ್ನೂ ಕೂಡ ವಿಚಾರಣೆ ನಡೆಸಲು ಸಿಸಿಬಿ ನಿರ್ಧರಿಸಿದೆ.