ಸಲ್ಮಾನ್ ಖಾನ್ (Salman Khan) ನಟನೆಯ ‘ಟೈಗರ್ 3’ ಸಿನಿಮಾ ದೀಪಾವಳಿ ದಿನದಂದು ಜಗತ್ತಿನಾದ್ಯಂತ ಬಿಡುಗಡೆ ಆಗಿದೆ. ಸಿನಿಮಾ ರಿಲೀಸ್ ಗೂ ಮುನ್ನ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಹಾಗಾಗಿ ಅಡ್ವಾನ್ಸ್ ಬುಕ್ಕಿಂಗ್ ನಲ್ಲೇ ದಾಖಲೆ ರೀತಿಯಲ್ಲಿ ಟಿಕೆಟ್ ಗಳು ಮಾರಾಟವಾಗಿದ್ದವು. ಜೊತೆಗೆ ಹಬ್ಬವೂ ಕೂಡಿ ಬಂದಿದ್ದರಿಂದ ಮೊದಲ ದಿನದ ಗಳಿಕೆ ಎಷ್ಟಾಗಿರಬಹುದು ಎನ್ನುವ ಚರ್ಚೆ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ಬಾಲಿವುಡ್ ನ ಟ್ರೇಡ್ ಅನಾಲಿಸ್ಸ್ ಪ್ರಕಾರ ಫಸ್ಟ್ ಡೇ ಕಲೆಕ್ಷನ್ (Collection) ಬರೋಬ್ಬರಿ 44.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ತೆಲುಗಿನಲ್ಲಿ 1.15 ಕೋಟಿ ರೂಪಾಯಿ, ತಮಿಳಿನಲ್ಲಿ ಕೇವಲ 15 ಲಕ್ಷ ರೂಪಾಯಿ ಮತ್ತು ಹಿಂದಿಯಲ್ಲಿ ಬರೋಬ್ಬರಿ 43 ಕೋಟಿ ರೂಪಾಯಿ ಕಮಾಯಿ ಮಾಡಿದೆ ಎಂದು ವರದಿಯಾಗಿದೆ. ಈವರೆಗೂ ಸಲ್ಮಾನ್ ಖಾನ್ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ಅನ್ನು ಟೈಗರ್ 3 ಬ್ರೇಕ್ ಮಾಡಿದೆ.