ಬೆಂಗಳೂರು:- ಸೋಮವಾರದ ಮೊದಲ 12 ಗಂಟೆಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಕಣಮಾಲಿನ್ಯ 2.5 ಮಟ್ಟದಲ್ಲಿ ಶೇಕಡಾ 55 ರಷ್ಟು ಹೆಚ್ಚಳವಾಗಿದೆ ಎಂದು ಎನ್ಸಿಎಪಿ ಟ್ರ್ಯಾಕರ್ ವರದಿ ತಿಳಿಸಿದೆ.
ನವೆಂಬರ್ 11 ರಿಂದ ದೀಪಾವಳಿ ಪೂರ್ವದ ಕಣಮಾಲಿನ್ಯ 2.5 ಮಟ್ಟವನ್ನು ಸೋಮವಾರ ಬೆಳಿಗ್ಗೆ 12 ರಿಂದ ಮಧ್ಯಾಹ್ನ 12 ರವರೆಗಿನ 12 ಗಂಟೆಗಳ ಅಂಕಿಅಂಶಗಳ ಜೊತೆ ಹೋಲಿಕೆ ಮಾಡಿ ಸಂಶೋಧಕರು 11 ನಗರಗಳ ಗಾಳಿಯ ಗುಣಮಟ್ಟವನ್ನು ವಿಶ್ಲೇಷಿಸಿದ್ದಾರೆ. ಕಣಮಾಲಿನ್ಯ 2.5 ಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ದೈನಂದಿನ ಸುರಕ್ಷಿತ ಮಿತಿ ಪ್ರತಿ ಘನ ಮೀಟರ್ಗೆ 15 ಮೈಕ್ರೋಗ್ರಾಂಗಳು.
2022 ದೀಪಾವಳಿ ದಿನಗಳಿಗೆ ಹೋಲಿಸಿದರೆ, ಬೆಂಗಳೂರು ಉತ್ತಮವಾಗಿದೆ ಆದರೆ ಉಳಿದ ನಗರಗಳಲ್ಲಿ ಮಾಲಿನ್ಯ ಏರಿಕೆ ಕಂಡಿವೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಸರಾಸರಿ ಪಿಎಂ 2.5 ಕಳೆದ ವರ್ಷ ಪ್ರತಿ ಘನಕ್ಕೆ 81.5 ಮೈಕ್ರೋಗ್ರಾಂ ಆಗಿತ್ತು. ಈ ವರ್ಷ 65.8ಕ್ಕೆ ಇಳಿಕೆಯಾಗಿದೆ. ಆದಾಗ್ಯೂ, ಕೆಲವು ನಗರಗಳು ಅಂಕಿಅಂಶಗಳು ಸುಮಾರು ದ್ವಿಗುಣಗೊಂಡಿವೆ.