ಚಾಮರಾಜನಗರ: ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ 108 ಬಾಲೆಯರಿಂದ ಹಾಲರವೆ ಅದ್ದೂರಿಯಾಗಿ ನಡೆಯಿತು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ತಂಬಂಡಿಗೇರಿಯ,
ಬಳಿಯ ಹರಿಯುವ ನೀರನ್ನು ಮಡಿಯುಟ್ಟು 108 ಕನ್ಯಾ ಬಾಲೆಯರು ಮಹದೇಶ್ವರ ನ ಜಲಾಭಿಷೇಕಕ್ಕೆ ಕೊಂಡೊಯ್ದರು. ಹಸಿರು ಸೀರೆಯನ್ನುಟ್ಟ ಬಾಲೆಯರು ಭಕ್ತಿಪೂರ್ವಕವಾಗಿ ಹಾಲರವೆ ಮೆರವಣಿಯಲ್ಲಿ ಭಾಗಿಯಾಗಿದ್ದರು. ದೇವಾಲಯದ ಅನೆಯ ಗಜ ನಡೆಯ ಹಿಂದೆ ಹಾಲರವೆ ಮೆರವಣಿಗೆ ನಡೆಯಿತು.ಶ್ರೀಮಲೆ ಮಹದೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಸರಸ್ವತಿ,
ಸಾಲೂರು ಮಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ, ಹಾಗೂ ಅರ್ಚಕರ ಸಮ್ಮುಖದಲ್ಲಿ ಹಾಲರವೆ, ಧಾರ್ಮಿಕ ವಿಧಿ ವಿಧಾನಗಳು ನಡೆದವು ಹೋಮ ಜರುಗಿತು. ಬೆಟ್ಟದಲ್ಲಿ ಬೀಡು ಬಿಟ್ಟಿದ್ದ ಸಾವಿರಾರು ಭಕ್ತರು ಹಾಲರವೆ ಮೆರವಣಿಗೆ ಕಣ್ತುಂಬಿಸಿಕೊಂಡರು.ದೇವಾಲಯದ ಗರ್ಭ ಗುಡಿ ವಿವಿಧ ಆಕರ್ಷಿತ ಹೂಗಳಿಂದ ಅಲಂಕಾರ ಮಾಡಲಾಗಿತ್ತು.