ಮೈಸೂರು: ರಾಜ್ಯ ದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬರ ಅಧ್ಯಯನ ನಡೆಸುತ್ತಿದ್ದೇವೆ. ಈ ನಡುವೆ ಜನಪರ ಹೋರಾಟವೂ ಆರಂಭವಾಗಿದೆ. ಅಧಿವೇಶನದ ವೇಳೆಯೂ ಈ ಸಂಬಂಧ ಹೋರಾಟ ನಡೆಯಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ನಗರದಲ್ಲಿ ಮಾತನಾಡಿದ ಅವರು,
ರೈತರ ಕಷ್ಟ ಆಲಿಸದಿದ್ದರೆ ಬೆಳಗಾವಿ ಅಧಿವೇಶನಕ್ಕೆ ಜನಪ್ರತಿನಿಧಿಗಳು ಸುವರ್ಣಸೌಧಕ್ಕೆ ಹೋಗಲೂ ಬಿಡುವುದಿಲ್ಲ ಎಂದು ಎಚ್ಚರಿಸಿದ ಅವರು, ರಾಜ್ಯ ದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬರ ಅಧ್ಯಯನ ನಡೆಸುತ್ತಿದ್ದೇವೆ.ಈ ನಡುವೆ ಜನಪರ ಹೋರಾಟವೂ ಆರಂಭವಾಗಿದೆ. ಅಧಿವೇಶನದ ವೇಳೆಯೂ ಈ ಸಂಬಂಧ ಹೋರಾಟ ನಡೆಯಲಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಿ.ವೈ.ವಿಜಯೇಂದ್ರ!
ಬರ ಪರಿಹಾರಕ್ಕೆ 300 ಕೋಟಿ ರು.ಕೊಡಲಾಗಿದೆ. ಈ ಹಣ ಯಾವುದಕ್ಕೆ ಬಳಕೆ ಆಗಿದೆ? ಒಂದು ಬೋರ್ವೆಲ್ ಕೊರೆ ದಿಲ್ಲ. ಕುಡಿಯುವ ನೀರು ಸಮಸ್ಯೆಯೂ ಬಗೆಹರಿದಿಲ್ಲ. ರಸ್ತೆ ಗುಂಡಿಮುಚ್ಚಿಲ್ಲ. ಅಂದ ಮೇಲೆ ಈ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಅವರು ಪ್ರಶ್ನಿಸಿದರು.