ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ‘ಅಪರಿಚಿತ’ ಬಂದೂಕುಧಾರಿಗಳಿಂದ ಉಗ್ರರ ಸಂಹಾರ ಕಾರ್ಯಾಚರಣೆ ಮುಂದುವರಿದಿದೆ. ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಹಾಗೂ ಮೌಲಾನಾ ಮಸೂದ್ ಅಜರ್ನ ಆಪ್ತ ಸ್ನೇಹಿತ ಮೌಲಾನಾ ರಹೀಮ್ ಉಲ್ಲಾ ತಾರೀಖ್ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಕರಾಚಿಯಲ್ಲಿ ಭಾರತ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿ ಭಾಷಣ ಮಾಡಲು ತೆರಳುತ್ತಿದ್ದ ರಹೀಮ್ ಉಲ್ಲಾ ಗುಂಡೇಟಿಗೆ ಬಲಿಯಾಗಿದ್ದಾನೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಿ.ವೈ.ವಿಜಯೇಂದ್ರ!
ಕರಾಚಿಯ ಓರಂಗಿ ಪಟ್ಟಣ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಇದು ನಿರ್ದಿಷ್ಟ ಹತ್ಯೆಯ ಪ್ರಕರಣದಂತೆ ಕಾಣಿಸುತ್ತಿದೆ ಎಂದು ಪೊಲೀಸ್ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತಾರೀಖ್ ಪಾಕಿಸ್ತಾನದಲ್ಲಿ ಖ್ಯಾತ ಮೌಲಾನಾನಾಗಿದ್ದು, ಆತನ ಭಾಷಣಗಳನ್ನು ಕೇಳಲು ಸಾವಿರಾರು ಜನರು ಸೇರುತ್ತಾರೆ. ಧಾರ್ಮಿಕ ಸಮಾವೇಶಗಳಲ್ಲಿ ಆತ ಭಾರತ ವಿರೋಧಿ ಭಾಷಣಗಳನ್ನು ಮಾಡುತ್ತಿದ್ದ.