ಬೆಂಗಳೂರು: ನಿಯಂತ್ರಣ ತಪ್ಪಿ ಕಾರೊಂದು (Car) 4 ಬೈಕ್ಗಳಿಗೆ (Bike) ಡಿಕ್ಕಿ ಹೊಡೆದು ನಿಲ್ಲಿಸದೇ ಮುಂದೆ ಹೋಗಿರುವ ಘಟನೆ ಕಾಳೇನ ಅಗ್ರಹಾರ ಬಳಿ ನಡೆದಿದೆ. ಸರಣಿ ಅಪಘಾತದ (Serial Accident) ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಿನ್ನ ತಂದೆ ದಾರಿಯಲ್ಲೇ ಹೋಗು ಯಶಸ್ಸು ಸಿಗುತ್ತದೆ ಎಂದರು: HDD ಭೇಟಿ ಬಳಿಕ ವಿಜಯೇಂದ್ರ ಹೇಳಿಕೆ
ನಿಯಂತ್ರಣ ತಪ್ಪಿ ಕಾರು ಚಾಲಕ 4 ಬೈಕ್ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕಿರಣ್ ಮೇಲಕ್ಕೆ ಹಾರಿ ಕೆಳಗೆ ಬಿದ್ದಿದ್ದಾರೆ. ಜಸ್ಮಿತಾ ಹಾಗೂ ವಸಂತ್ ಕುಮಾರ್ ಎಂಬವರು ಮತ್ತೊಂದು ಬೈಕ್ನಲ್ಲಿದ್ದು, ಜಸ್ಮಿತಾಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಕಾರು ಚಾಲಕ ಎಡ ಬದಿಯಿಂದ ಓವರ್ ಟೇಕ್ ಮಾಡಲು ಪ್ರಯತ್ನಿಸಿರುವುದು ಕಂಡುಬಂದಿದೆ. ಆತ ಒಂದು ಬೈಕ್ಗೆ ಡಿಕ್ಕಿ ಹೊಡೆದಾಗ ಗಾಬರಿಯಿಂದ ಕಾರನ್ನು ನಿಲ್ಲಿಸದೆ ಇನ್ನೂ 3 ಬೈಕ್ ಗಳಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿರುವುದು ಸೆರೆಯಾದ ದೃಶ್ಯದಲ್ಲಿ ಕಂಡುಬಂದಿದೆ.