ದೆಹಲಿ: ವಿಶ್ವಕಪ್ನಿಂದ (World Cup) ಹೊರ ನಡೆದ ಪಾಕ್ (Pakistan) ತಂಡ ಕೆಲವು ಬದಲಾವಣೆಗಳನ್ನು ಕೈಗೊಂಡರೆ ಭಾರತದಂತೆ (Team India) ಬಲಿಷ್ಠವಾಗಲಿದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಬಾಬರ್ ಅಜಂ, ಶಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್ನಂತಹ ಪ್ರತಿಭಾನ್ವಿತ ಆಟಗಾರರಿದ್ದಾರೆ. ಕೆಲವು ಸರಿಯಾದ ನಿರ್ಧಾರ ಹಾಗೂ ಬದಲಾವಣೆಗಳನ್ನು ಮಾಡಿಕೊಂಡರೆ ಪಾಕ್ ಉತ್ತಮವಾಗಿ ಆಡಲು ಸಾಧ್ಯವಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಹಿಂದೆಯೂ ಬಲಿಷ್ಠವಾಗಿತ್ತು. ಈಗಲೂ ಪ್ರತಿಭಾವಂತ ಆಟಗಾರರಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಭ್ಯಾಸ ಹಾಗೂ ಉತ್ತಮ ನಾಯಕತ್ವ ಗುಣಗಳು ಯಶಸ್ವಿಯಾಗಲು ಸಾಧ್ಯವಿದೆ. ಪಾಕ್ ಮತ್ತೆ ಉತ್ತಮವಾಗಿ ಕ್ರಿಕೆಟ್ ಆಡುವ ನಿರೀಕ್ಷೆ ಇದೆ. ಕೇವಲ ಐಪಿಎಲ್ ಆಡುವುದರಿಂದ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಕ್ರಮವಾದ ಅಭ್ಯಾಸದಿಂದ ಮಾತ್ರ ಯಶಸ್ವಿಯಾಗಿ ಪ್ರದರ್ಶನ ನೀಡಲು ಸಾಧ್ಯ ಎಂದಿದ್ದಾರೆ.
ಹಣ ಸಂಪಾದನೆಗೆ ಮಾತ್ರ ಟಿ-20 ಪಂದ್ಯಗಳನ್ನು ಆಡಿ. ಉತ್ತಮ ಆಟಗಾರರು 4-5 ದಿನ ನಿರಂತರವಾಗಿ ಕ್ರಿಕೆಟ್ ಆಡಬೇಕು. ಭಾರತದಲ್ಲಿ ಕ್ರಿಕೆಟ್ಗೆ ಉತ್ತಮ ವಾತಾವರಣವಿದೆ ಎಂದಿದ್ದಾರೆ.