ಹುಬ್ಬಳ್ಳಿ: ಪೊಲೀಸರು ತಪ್ಪು ಮಾಡಿದ್ದರೆ ಬುದ್ದಿ ಹೇಳಿ ಬಹಿರಂಗವಾಗಿ ಹೀಗೆ ಮಾಡಿದ್ದು ಸರಿನಾ ಎಂದು ಎಸ್ ಎಸ್ ಕೆ ಸಮಾಜದ ಯುವ ಮುಖಂಡ ರಾಜು ಹನಮಂತಸಾ ನಾಯಕವಾಡಿ ಪ್ರಶ್ನೆ ಮಾಡಿದ್ದಾರೆ .
ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ್ದು, ಪ್ರಕರಣವೊಂದರಲ್ಲಿ ಧಾರವಾಡದ ಉಪನಗರ ಪೊಲೀಸ್ ಠಾಣೆ ಇನಸ್ಪೇಕ್ಟರ್ ಕಾಡದೇವರ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ತರಾಟೆಗೆ ತಗೆದುಕೊಂಡಿದ್ದಾರೆ.ಪೊಲೀಸ್ ಅಧಿಕಾರಿಗಳನ್ನು ತರಾಟಗೆ ತಗೆದುಕೊಂಡಿರುವ ವಿಡಿಯೋ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಕೇಂದ್ರ ಸಚಿವರ ಈ ಒಂದು ನಡೆಯನ್ನು ಅವರು ಖಂಡಿಸಿದ್ದಾರೆ.ಸರಳ ಸಜ್ಜನಿಕೆಗೆ ತಾವೊಬ್ಬರು ಹೆಸರಾಗಿದ್ದು ಪೊಲೀಸರು ತಪ್ಪು ಮಾಡಿದ್ದರೆ ಸಮಸ್ಯೆಗಳನ್ನು ಸಾರ್ವಜನಿಕರು ನಿಮ್ಮ ಮುಂದೆ ತಗೆದುಕೊಂಡು ಬಂದಿದ್ದರೆ ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿ ಅವರಿಗೆ ಬುದ್ದಿ ಹೇಳಿ ಆದರೆ ಹೀಗೆ ಬಹಿರಂಗವಾಗಿ ಮಾಡಿದ್ದು ಸರಿನಾ ಎಂದು ಪ್ರಶ್ನೆಯನ್ನು ಮಾಡಿದ್ದಾರೆ.
ಹೀಗಾಗಿ ಈ ಕೂಡಲೇ ಆ ಒಂದು ಪೊಲೀಸ್ ಅಧಿಕಾರಿಯನ್ನು ಕರೆಯಿಸಿ ಆತ್ಮಸ್ಥೈರ್ಯವನ್ನು ತುಂಬಿ ಕ್ಷಮೆ ಕೇಳುವಂತೆ ಒತ್ತಾಯವನ್ನು ಮಾಡಿದ್ದಾರೆ.ಹೀಗೆ ಮಾಡಿದರೆ ಇನ್ನೂಳಿದಂತೆ ಕಾರ್ಯಕರ್ತರಿಗೆ ನೀವು ಬೇರೆ ಬೇರೆ ಚಟುವಟಿಕೆಗಳನ್ನು ಮಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ ಹೀಗೆ ಮಾಡಬಾರದು ತಾವೊಬ್ಬರು ಸರಳ ಸಜ್ಜನಿಕೆಯ ರಾಜಕಾರಣಕ್ಕೆ ಮಾದರಿಯಾಗಿದ್ದು ಹೀಗೆ ಬಹಿರಂಗವಾಗಿ ಹೀಗೆ ಮಾಡಿದ್ದು ಖಂಡನೀಯ ಎಂದು ಖಂಡಿಸಿದ್ದಾರೆ. ಕಈ ಒಂದು ನಡೆಯನ್ನು ಈ ಒಂದು ಕುರಿತಂತೆ ಕೇಂದ್ರ ಸಚಿವರ ಸಜ್ಜನಿಕೆಯ ರಾಜಕಾರಣಿ ಪೊಲೀಸ್ ಅಧಿಕಾರಿಗಳಿಗೆ ಹೀಗೆ ಮಾಡಬಾರದು ಎಂದಿದ್ದಾರೆ.