ಬಳ್ಳಾರಿ: ಬಳ್ಳಾರಿ ತಾಲೂಕಿನ ಡಿ.ಕಗ್ಗಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ 4 ಶಿಕ್ಷಕರಿಗೆ ಏಕಕಾಲದಲ್ಲಿ ವರ್ಗಾವಣೆಗೊಂಡ ಹಿನ್ನೆಲೆ, ಡಿಜೆ ಹಾಕಿ, ಬೆಳ್ಳಿ ರಥದಲ್ಲಿ ಮೈದಾನದಿಂದ ಡಿ.ಕಗ್ಗಲ್ ಗ್ರಾಮದ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮೆರವಣಿಗೆ ಮಾಡುವ ಮೂಲಕ ಅದ್ದೂರಿ ಬೀಳ್ಕೊಡುಗೆ ನೀಡಿದ್ದಾರೆ. ಏಕಕಾಲದಲ್ಲಿ ವರ್ಗಾವಣೆಗೊಂಡ ಒಂದೇ ಶಾಲೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ 4 ಶಿಕ್ಷಕರಿಗೆ ವಿಶೇಷ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಗಿದೆ.
ಡಿ.ಕೆ.ವಿನಯ್, ರಾಘವ, ಸಾಗರ್, ಬಸಪ್ಪ ವರ್ಗಾವಣೆಗೊಂಡ ನಾಲ್ವರು ಶಿಕ್ಷಕರು. ಬಳ್ಳಾರಿ ತಾಲೂಕಿನ ಡಿ.ಕಗ್ಗಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಈ 4 ಶಿಕ್ಷಕರ ಬಿಳ್ಕೋಡಿಗೆ ಸಮಾರಂಭಕ್ಕೆ ಗ್ರಾಮದ ಜನರು ಪಾಲ್ಗೊಂಡು ಶಿಕ್ಷಕರಿಗೆ ಸನ್ಮಾನಿಸಿ ಸಂಭ್ರಮದಿಂದ ಬಿಳ್ಕೋಡಿಗೆ ಸಮಾರಂಭವನ್ನು ವಿದ್ಯಾರ್ಥಿಗಳ ಜೊತೆಗೂಡಿ ನೇರವೇರಿಸಿದರು.