ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ ನೂತನ ಆಯ್ಕೆ ಬೆನ್ನೆಲ್ಲೆ ಬಿಜೆಪಿ ಕಚೇರಿಗೆ ಸುಣ್ಣ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ.
ಮಲ್ಲೇಶ್ವರಂನ ಜಗನ್ನಾಥ ಭವನಕ್ಕೆ ನಡೆಯುತ್ತಿರುವ ಸುಣ್ಣ ಬಣ್ಣದ ಕಾರ್ಯ ನೂತನ ಅಧ್ಯಕ್ಷರು ಕಚೇರಿಗೆ ಆಗಮಿಸುವ ಮುನ್ನ ಸುಣ್ಣ ಬಣ್ಣದೊಂದಿಗೆ ಕಚೇರಿ ಸಿಂಗಾರ ಗೊಳಿಸುವ ಕಾರ್ಯ ನಡೆಯುತ್ತಿದೆ.
ನವೆಂಬರ್ 15ರಂದು ಪಕ್ಷದ ಕಚೇರಿಗೆ ಭೇಟಿ ನೀಡ್ತಿರುವ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅಂದೇ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರ ಮಾಡಲಿದ್ದಾರೆ.