ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ (Karnataka BJP) ಅಸಮಾಧಾನ, ಕಾಂಗ್ರೆಸ್ ಟೀಕೆಗಳ ನಡುವೆ ಬಿಜೆಪಿಯ ನೂತನ ಅಧ್ಯಕ್ಷ ವಿಜಯೇಂದ್ರ (BY Vijayendra) ಪದಗ್ರಹಣಕ್ಕೆ ಮುಹೂರ್ತ ನಿಗದಿಯಾಗಿದೆ. ನವೆಂಬರ್ 15ರ ಬೆಳಗ್ಗೆ 10 ಗಂಟೆಗೆ ಪಕ್ಷದ ಕಚೇರಿಯಲ್ಲಿ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP President) ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ರಾಜ್ಯಾಧ್ಯಕ್ಷ ಪಟ್ಟ: ನಿರ್ಮಲನಂದನಾಥ ಶ್ರೀ ಆಶೀರ್ವಾದ ಪಡೆದ BY ವಿಜಯೇಂದ್ರ
ಬುಧವಾರ ಮಧ್ಯಾಹ್ನ 1 ಗಂಟೆಗೆ ಅರಮನೆ ಮೈದಾನದಲ್ಲಿ (Palace Ground) ಪದಗ್ರಹಣ ಸಮಾವೇಶ ನಡೆಯಲಿದೆ. ಇದಾದ ಮರುದಿನವೇ ನವೆಂಬರ್ 16ರಂದು ವಿಜಯೇಂದ್ರ ಪಕ್ಷದ ಶಾಸಕಾಂಗ ಸಭೆ ನಡೆಸಲು ಚಿಂತನೆ ನಡೆಸಿದ್ದಾರೆ. ಈ ವಿಚಾರವನ್ನು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ (JP Nadda) ಜೊತೆ ಚರ್ಚಿಸಿ ಅಂತಿಮಗೊಳಿಸಲಿದ್ದಾರೆ
ವಿಜಯೇಂದ್ರ ಮೊದಲ ದಿನವೇ ಪಕ್ಷ ಸಂಘಟನೆಯ ಕೆಲಸಕ್ಕೆ ಕೈ ಹಾಕಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿ ಬೂತ್ ಅಧ್ಯಕ್ಷನ ಮನೆಗೆ ವಿಜಯೇಂದ್ರ ಮೊದಲ ಭೇಟಿ ನೀಡಿದರು. ಈ ಮೂಲಕ ಪಕ್ಷದ ಸಂಘಟನೆಯೇ ತಮ್ಮ ಮೊದಲ ಆದ್ಯತೆ. ಲೋಕಸಭೆ ಚುನಾವಣೆ ಗೆಲ್ಲುವುದೇ ನಮ್ಮ ಮುಂದಿರುವ ಸವಾಲು ಎಂಬ ಸಂದೇಶ ರವಾನಿಸಿದರು. ಚಾಮರಾಜನಗರ, ಮಂಡ್ಯ, ದಾವಣಗೆರೆ ಸೇರಿ ಹಲವೆಡೆ ಬಿಜೆಪಿ ಸಂಭ್ರಮಾಚರಣೆಗಳು ನಡೆದಿವೆ.
ಈ ಮಧ್ಯೆ, ವಿಪಕ್ಷ ನಾಯಕನ ಜವಾಬ್ದಾರಿ ನೀಡಿದಲ್ಲಿ ಸಮರ್ಥವಾಗಿ ನಿರ್ವಹಿಸಲು ಸಿದ್ದ ಎಂದು ಅಶ್ವಥ್ನಾರಾಯಣ್ ಘೋಷಿಸಿದ್ದಾರೆ. ಜೊತೆಗೆ ಜೆಡಿಎಸ್ಗೆ ವಿಪಕ್ಷ ನಾಯಕನ ಸ್ಥಾನ ನೀಡುವುದನ್ನು ವಿರೋಧಿಸಿದ್ದಾರೆ.