ಸ್ಯಾಂಡಲ್ವುಡ್ (Sandalwood) ನಟಿ ರಾಧಿಕಾ ಕುಮಾರಸ್ವಾಮಿ (Radhika Kumarswamy) ಇಂದು ತಮ್ಮ ಹುಟ್ಟು ಹಬ್ಬವನ್ನು (Birthday) ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟು ಹಬ್ಬದ ದಿನದಂದು ಅವರ ನಟನೆಯ ಭೈರಾದೇವಿ ಮತ್ತು ಅಜಾಗ್ರತ ಚಿತ್ರಗಳ ಪೋಸ್ಟರ್ ರಿಲೀಸ್ ಆಗುತ್ತಿವೆ.
ಕಳೆದ ಕೆಲವು ವರ್ಷಗಳಿಂದ ಬರ್ತ್ಡೇ ಆಚರಣೆಯಿಂದ ದೂರವಿದ್ದ ಸ್ವೀಟಿ, ಈ ಬಾರಿ ಫ್ಯಾನ್ಸ್ಗೆ ಭೇಟಿಯಾಗಲು ಸಮಯ ಮೀಸಲಿಟ್ಟಿದ್ದಾರೆ. ಅಭಿಮಾನಿಗಳ ಜೊತೆಯೇ ಇಂದು ತಮ್ಮ ಹುಟ್ಟುಹಬ್ಬವನ್ನು (Birthday) ಫ್ಯಾನ್ಸ್ ಜೊತೆ ನಟಿ ಆಚರಿಸಿಕೊಳ್ಳಲಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ನಟಿ ಫ್ಯಾನ್ಸ್ಗೆ ಆಹ್ವಾನ ನೀಡಿದ್ದರು. ನಮಸ್ಕಾರ, ಹಲವು ವರ್ಷಗಳಿಂದ ಅಭಿಮಾನಿಗಳನ್ನ ಭೇಟಿ ಮಾಡೋಕೆ ಆಗಿರಲಿಲ್ಲ. ನ.11ರಂದು ಶನಿವಾರ ನನ್ನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ. ಅಂದು ನಿಮಗೆ ಸಿಗುತ್ತೇನೆ ಎಂದಿದ್ದರು ರಾಧಿಕಾ ಕುಮಾರಸ್ವಾಮಿ.
ಇದೇ ಮೊದಲ ಬಾರಿಗೆ ಅವರು ತಮ್ಮ ಮನೆಯ ವಿಳಾಸ ಕೂಡ ನೀಡಿದ್ದರು. 10/11 ಎರಡನೇ ಮುಖ್ಯ ರಸ್ತೆ, ಎರಡನೇ ಕ್ರಾಸ್ ಆರ್ಎಂವಿ ಎರಡನೇ ಸ್ಟೇಜ್, ಮೂರನೇ ಬ್ಲಾಕ್ ನ್ಯೂ ಬೆಲ್ ರೋಡ್, ಡಾಲರ್ಸ್ ಕಾಲೋನಿ ಬೆಂಗಳೂರು ಇದು ನನ್ನ ಮನೆಯ ವಿಳಾಸ. ದಯವಿಟ್ಟು ಬನ್ನಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದರು.