ಮೊಟ್ಟೆಗಳನ್ನ ಪ್ರೋಟೀನ್ ಗಳ ನಿಧಿ ಎಂದು ಹೇಳಲಾಗುತ್ತದೆ. ವಿಶ್ವದಾದ್ಯಂತ ಮೊಟ್ಟೆಗಳನ್ನು ಪ್ರೋಟೀನ್ಗಳ ನಿಧಿ ಎಂದು ಹೇಳಲಾಗುತ್ತದೆ. ಪ್ರಪಂಚದಾದ್ಯಂತ ಜನರು ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ. ಜನರು ತಮ್ಮ ಇಚ್ಛೆಯಂತೆ ವಿವಿಧ ರೀತಿಯಲ್ಲಿ ಮೊಟ್ಟೆಗಳನ್ನು ತಿನ್ನಬಹುದಾದರೂ ನೀವು ಮೊಟ್ಟೆಗಳನ್ನು ಹೇಗೆ ತಿನ್ನುತ್ತೀರಿ ಎಂಬುದು ಮುಖ್ಯವಲ್ಲ,
ಆದರೆ ಕೆಲವು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ, ಖಂಡಿತವಾಗಿಯೂ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಮೊಟ್ಟೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಿದ್ದರೂ, ನೀವು ಅದನ್ನು ಹೇಗೆ ತಯಾರಿಸುತ್ತೀರಿ ಎಂಬುದರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುತ್ತದೆ.
ಮೊಟ್ಟೆಯಿಂದ ಶಕ್ತಿ ಸಂಪೂರ್ಣ ಪೋಷಕಾಂಶ ಸಿಗುತ್ತದೆ ಎನ್ನುತ್ತಾರಾದರೂ ಬಹುತೇಕ ಮಂದಿ ಮೊಟ್ಟೆಯ ಹಳದಿ ಭಾಗವನ್ನು ತ್ಯಜಿಸುತ್ತಾರೆ. ಆದರೆ ನಿಮಗೆ ಮೊಟ್ಟೆಯಿಂದ ಹೆಚ್ಚಿನ ಪೋಷಕಾಂಶ ಬೇಕು ಅನ್ನೋದಾದರೆ ಮೊಟ್ಟೆಯ ಹಳದಿಭಾಗವನ್ನೂ ತಿನ್ನಬೇಕು. ಏಕೆಂದರೆ ಮೊಟ್ಟೆಯಲ್ಲಿರುವ ಹೆಚ್ಚಿನ ಪೋಷಕಾಂಶಗಳು ಅದರ ಹಳದಿ ಲೋಳೆಯಲ್ಲಿಯೇ ಹೆಚ್ಚಾಗಿರುತ್ತವೆ.
ಸಂಪೂರ್ಣ ಮೊಟ್ಟೆ ಸಂಪೂರ್ಣ ಪೋಷಕಾಂಶ. ಬಿಳಿ ಪದರ ಮತ್ತು ಹಳದಿ ಭಾಗ ಎರಡೂ ತಿನ್ನೋದು ಒಳ್ಳೆಯದೇ. ಮೊಟ್ಟೆಯ ಈ ಭಾಗವನ್ನೂ ತಿನ್ನೋದ್ರಿಂದ ಹೊಟ್ಟೆ ತುಂಬಿದಂತಿರುತ್ತದೆ. ಬಹಳ ಸಮಯ ಹೊಟ್ಟೆ ಹಸಿಯುವುದಿಲ್ಲ. ಹೀಗಾಗಿ ಇದನ್ನು ಡಯಟ್ ನಲ್ಲಿ ಸೇರಿಸೋದು ಬಹುಮುಖ್ಯ ಎನ್ನುತ್ತಾರೆ ನ್ಯೂಟ್ರಿಷಿಯನ್ಸ್. ಮೊಟ್ಟೆಯನ್ನ ಸೂಪರ್ ಫುಡ್ ಅಂತ ಪರಿಗಣಿಸಲಾಗುತ್ತೆ.
ಆಧುನಿಕ ಶೈಲಿಯ ಆಹಾರ ಪದ್ಧತಿಯಿಂದಾಗುವ ಕೊರತೆ ಮೊಟ್ಟೆಯ ಪೋಷಕಾಂಶದಿಂದ ಸಿಗುತ್ತೆ ಎನ್ನುತ್ತಾರೆ ಆರೋಗ್ಯ ತಜ್ಞರು. ಒಂದು ಸಂಪೂರ್ಣ ಮೊಟ್ಟೆಯಲ್ಲಿ ವಿಟಮಿನ್ ಎ ಶೇ.6, ವಿಟಮಿನ್ ಬಿ-5 ಶೇ.7, ವಿಟಮಿನ್ ಬಿ-12 ಶೇ.9 ರಂಜಕ ಶೇ.9, ವಿಟಮಿನ್ ಬಿ2 ಶೇ.15, ಸೆಲೆನಿಯಮ್ ಶೇ.22, ಇರುವುದರಿಂದ ಮೊಟ್ಟೆಯನ್ನು ತಿನ್ನುವಾಗ ಹಳದಿ ಭಾಗಕ್ಕೂ ಗಮನ ಕೊಡಿ ಸಂಪೂರ್ಣ ಪೋಷಕಾಂಶ ಹೊಂದಿ.