ಆಂದ್ರಪ್ರದೇಶ: ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ಸ್ಪರ್ಧಿಸಿರುವ ಸಿಎಂ ಚಂದ್ರಶೇಖರ್ ರಾವ್ ತಮ್ಮ ಬಳಿ ಇರುವ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದಾರೆ. ತಮ್ಮ ಬಳಿ 58.92 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಚಂದ್ರಶೇಖರ್ ರಾವ್ ಘೋಷಿಸಿಕೊಂಡಿದ್ದಾರೆ.
ಸಿಎಂ ಆಗಿರುವ ಕೆಸಿಆರ್ ಸ್ವಂತದ ಕಾರು, ಕೃಷಿ ಭೂಮಿಯನ್ನು ಹೊಂದಿಲ್ಲ. ಆದರೆ, ಪ್ರಮಾಣಪತ್ರದಲ್ಲಿ ತಾವು ಕೃಷಿಕರು ಎಂದು ನಮೂದಿಸಿರುವುದು ವಿಚಿತ್ರವಾಗಿದೆ. ಬಿಆರ್ಎಸ್ ನಾಯಕ ಕೆಸಿಆರ್ ಗಜ್ವೆಲ್ ಮತ್ತು ಕಮ್ಮಾರೆಡ್ಡಿ ಎರಡೂ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರು.
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ʼನಲ್ಲಿದೆ ಉದ್ಯೋಗಾವಕಾಶ..! ಬೆಂಗಳೂರಿನಲ್ಲಿಯೇ ಪೋಸ್ಟಿಂಗ್
2018 ರ ಚುನಾವಣೆಯಲ್ಲಿ ಕೆಸಿಆರ್ ಬಳಿ 22 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇತ್ತು. ಈ ಹಿಂದೆಯೂ ತಮ್ಮ ಬಳಿ ಸ್ವಂತ ಕಾರು ಇಲ್ಲವೆಂದು ಘೋಷಿಸಿದ್ದರು. ಆದರೆ 2015 ರಲ್ಲಿ ಸಿಎಂ ಬೆಂಗಾವಲು ಪಡೆಯಲ್ಲಿ ನಾಲ್ಕು ಟೊಯಾಟಾ ಲ್ಯಾಂಡ್ ಕ್ರೂಸರ್ ಕಾರು ಇತ್ತು. ತಮ್ಮದು ಹಿಂದೂ ಅವಿಭಜಿತ ಕುಟುಂಬ ಎಂದು ಘೋಷಿಸಿರುವ ಕೆಸಿಆರ್, ತಮ್ಮ ಒಟ್ಟು ಕುಟುಂಬದ ಆಸ್ತಿ 59 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ.
2.81 ಕೆ.ಜಿ ಚಿನ್ನಾಭರಣ, ವಜ್ರ
ಅಷ್ಟೇ ಅಲ್ಲದೇ ತಮಗೆ 25 ಕೋಟಿ ರೂಪಾಯಿ ಸಾಲ ಇರುವುದಾಗಿ ತಿಳಿಸಿದ್ದಾರೆ. ಪ್ರಮಾಣಪತ್ರದ ಪ್ರಕಾರ, ಕೆಸಿಆರ್ ಪತ್ನಿ ಶೋಭಾ ಬಳಿ ಒಟ್ಟು 7 ಕೋಟಿ ರೂಪಾಯಿ ಚರಾಸ್ತಿ ಇದ್ದು, ಹಿಂದೂ ಅವಿಭಕ್ತ ಕುಟುಂಬದಲ್ಲಿ 9 ಕೋಟಿ ರೂಪಾಯಿಗಳಷ್ಟು ಚರಾಸ್ತಿ ಇದೆ. ಅಷ್ಟೆ ಅಲ್ಲದೇ 2.81 ಕೆ.ಜಿ ಚಿನ್ನಾಭರಣ, ವಜ್ರ ಹಾಗೂ ಇತರ ಬೆಲೆ ಬಾಳುವ ಸುಮಾರು 1.5 ಕೋಟಿ ರೂಪಾಯಿ ವಸ್ತುಗಳಿವೆ.