ಕನ್ನಡದ ‘ಕಿಸ್’ ಬ್ಯೂಟಿ ಶ್ರೀಲೀಲಾ, ಟಾಲಿವುಡ್ ಅಂಗಳದಲ್ಲಿ ಮ್ಯಾಜಿಕ್ ಮಾಡ್ತಿರೋದು ಗೊತ್ತೇ ಇದೆ. ಸಾಲು ಸಾಲು ಸಿನಿಮಾಗಳಿಗೆ ಹೀರೋಯಿನ್ ಆಗಿ ಮೆರೆಯುತ್ತಿರುವ ಶ್ರೀಲೀಲಾ(Sreeleela) ‘ಗುಂಟೂರು ಖಾರಂ’ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು (Mahesh Babu) ಜೊತೆ ಲುಂಗಿ ಡ್ಯಾನ್ಸ್ ಮಾಡೋದ್ದಕ್ಕೆ ನಟಿ ರೆಡಿಯಾಗಿದ್ದಾರೆ.
ತ್ರಿವಿಕ್ರಮ್- ಮಹೇಶ್ ಬಾಬು ಜೊತೆ ಶ್ರೀಲೀಲಾ (Sreeleela) ಮೊದಲ ಬಾರಿಗೆ ಜೊತೆಯಾಗಿ ಸಿನಿಮಾ ಮಾಡಿದ್ದಾರೆ. ಇಬ್ಬರ ಜುಗಲ್ಬಂದಿ ಸವಿಯೋಕೆ ಪ್ರೇಕ್ಷಕರು ಕೂಡ ಕಾಯ್ತಿದ್ದಾರೆ. ಸಿನಿಮಾ ಕೂಡ ಕೊನೆಯ ಹಂತಕ್ಕೆ ಬಂದಿದೆ. ಬಾಕಿ ಉಳಿದಿರೋ ಸಾಂಗ್ ಶೂಟ್ಗೆ ತಯಾರಿ ನಡೆಯುತ್ತಿದೆ.
ಪ್ರಿನ್ಸ್ ಹೀರೋ ಜೊತೆ ಡ್ಯಾನ್ಸ್ ಕ್ವೀನ್ ಶ್ರೀಲೀಲಾ ಲುಂಗಿ ಡ್ಯಾನ್ಸ್ ಮಾಡೋಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಮಸ್ತ್ ಆಗಿ ಸಾಂಗ್ ಶೂಟ್ ಮಾಡಲು ಚಿತ್ರತಂಡ ಕೂಡ ಪ್ಲ್ಯಾನ್ ಮಾಡಿದೆ.