ದೊಡ್ಡಬಳ್ಳಾಪುರ:- ರಸ್ತೆ ದಾಟುತ್ತಿದ್ದ ಯುವಕ ಹಿಟ್ ಆಂಡ್ ರನ್ಗೆ ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ರೈಲ್ವೆ ನಿಲ್ದಾಣದ ಬಳಿ ಜರುಗಿದೆ.
ಖದೀರ್ ಪಾಷಾ ಮೃತ ದುರ್ದೈವಿ. ಖದೀರ್ ಪಾಷಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಮೂಟೆ ಹೊರುವ ಕೆಲಸ ಮಾಡಿಕೊಂಡಿದ್ದ ಖದೀರ್ ಪಾಷಾ ಕೆಲಸ ಮುಗಿಸಿ ವಾಪಸ್ ತೆರಳುವ ವೇಳೆ ಘಟನೆ ನಡೆದಿದೆ. ಅಪಘಾತ ಮಾಡಿ ವಾಹನ ನಿಲ್ಲಿಸದೆ ಪರಾರಿಯಾಗಿದೆ. ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.