ನೆಲಮಂಗಲ: ಖದೀಮರು ಮಂಕಿ ಕ್ಯಾಪ್ ಹಾಕಿಕೊಂಡು ಎಟಿಎಂ ದರೋಡೆಗೆ ಯತ್ನಿಸಿದ ಘಟನೆ ನೆಲಮಂಗಲ ತಾಲೂಕಿನ ಕುಲವನಹಳ್ಳಿಯಲ್ಲಿ ಘಟನೆ ಜರುಗಿದೆ.
ನಾಲ್ಕೈದು ಮಂದಿಯಿಂದ ಎಟಿಎಂ ದರೋಡೆ ನಡೆದಿದೆ. ಕೆನರಾ ಬ್ಯಾಂಕ್ ಗೆ ಸೇರಿದ ಎಟಿಎಂ ಇದಾಗಿದ್ದು, ಕಳ್ಳರ ಕರಾಮತ್ತು ಬ್ಯಾಂಕ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾರೆಯ ಮೂಲಕ ಬಾಗಿಲು ಮೀಟಲು ಯತ್ನ ವಿಫಲವಾಗಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.