ವಿಜಯನಗರ: ಹೊಸಪೇಟೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮದುವೆ ಆಮಂತ್ರಣ ಹಂಚುವ ಮೂಲಕ ಮಾಜಿ ಸಂಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಮಾಜಿ ಸಚಿವ ಶ್ರೀ ರಾಮುಲು ಪುತ್ರಿ ಮದುವೆ ಆಮಂತ್ರಣವನ್ನು ಮಾಜಿ ಸಂಸದೆ ಜೆ. ಶಾಂತ ಹಂಚಿದ್ದಾರೆ. ಮದುವೆಯ ಆಮಂತ್ರಣ ಪತ್ರ ಹಂಚೋದ್ರ ಜತೆಗೆ ಮದುವೆಗೆ ಬನ್ನಿ ಅಂತ ಮೈಕ್ ನಲ್ಲೇ ಆಮಂತ್ರಣ ಕೊಟ್ಟಿದ್ದಾರೆ.
ನಗರಸಭೆ ಸದಸ್ಯರು, ಮಾಜಿ ಸದಸ್ಯರು, ನಗರಸಭೆ ಸಿಬ್ಬಂದಿಗೆ ಆಮಂತ್ರಣ ಪತ್ರ ಹಂಚಿಕೆ ಮಾಡಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ನಗರಸಭೆಯಲ್ಲಿ ಮದುವೆ ಆಮಂತ್ರಣ ಹಂಚಿಕೆ ಮಾಡಲಾಗಿದ್ದು, ಇದ್ದರಿಂದ ಶಿಷ್ಟಾಚಾರ ಉಲ್ಲಂಘನೆ ಮಾಡಿದಂತಾಗಿದೆ.