ನವದೆಹಲಿ: ಪ್ರತಿ ವರ್ಷವೂ ದೆಹಲಿಯಲ್ಲಿ ವಾಯು ಮಾಲಿನ್ಯದ (Delhi Air Pollution) ಪ್ರಮಾಣ ಹೆಚ್ಚುತ್ತಿದೆ, ತೀವ್ರ ವಾಯು ಮಾಲಿನ್ಯ ಎದುರಿಸಲು ಸಾಧ್ಯವಿಲ್ಲ ಇದಕ್ಕೆ ಪರಿಹಾರವೇನು? ಎಂದು ಸುಪ್ರೀಂ ಕೋರ್ಟ್ (Supreme Court) ಪ್ರಶ್ನೆ ಮಾಡಿದೆ. ದೆಹಲಿ ಮಾಲಿನ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಕೆ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠ ದೆಹಲಿ, ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಕ್ಕೆ (Rajasthan Government) ಚಾಟೀ ಬೀಸಿದೆ.
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ: ಪರಿಹಾರ, ಉಚಿತ ಸಲಹೆ
ದೆಹಲಿಯಲ್ಲಿನ ವಾಯುಮಾಲಿನ್ಯ ಸಮಸ್ಯೆಯನ್ನು ರಾಜಕೀಯ ಚರ್ಚೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ, ಮಕ್ಕಳು ಮಾಲಿನ್ಯದಿಂದಾಗಿ ಆರೋಗ್ಯ ಸಮಸ್ಯೆ (Health Problem) ಎದುರಿಸುತ್ತಿದ್ದಾರೆ, ಕೂಡಲೇ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಬೇಕು ಮತ್ತು ಶುಕ್ರವಾರದೊಳಗೆ ಪರಿಸ್ಥಿತಿ ಸುಧಾರಣೆಗೆ ಕ್ರಮವಹಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಕೃಷಿ ತಾಜ್ಯ ಅಥವಾ ಹುಲ್ಲು ಸುಡುವಿಕೆ 20-50 ದಿನಗಳವರೆಗೆ ಮಾತ್ರ ಸಂಭವಿಸುತ್ತದೆ ಎಂದು ಪಂಜಾಬ್ ಎಜಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನೀವು ಅದನ್ನು ಹೇಗೆ ಮಾಡುತ್ತೀರಿ ಎಂಬುದರ ಬಗ್ಗೆ ನಮಗೆ ಬೇಕಾಗಿಲ್ಲ, ಹುಲ್ಲು ಸುಡುವುದು ಕೂಡಲೇ ನಿಲ್ಲಬೇಕು, ಎಲ್ಲ ರಾಜ್ಯಗಳು ಬೆಂಕಿಯನ್ನು ನಿಲ್ಲಿಸುವ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದೆ. ನಿಮ್ಮ ಸ್ಥಳೀಯ ಠಾಣೆಯ ಎಸ್ಎಚ್ಒ ಸಹ ಇದಕ್ಕೆ ಜವಾಬ್ದಾರಿಯಾಗಿರಬೇಕು. ಇಂದಿನಿಂದ ಅವರು ಕೆಲಸ ಮಾಡಲು ಪ್ರಾರಂಭಿಸಬೇಕು ಎಂದು ತಾಕೀತು ಮಾಡಿತು.
ವಿಚಾರಣೆಯ ಸಂದರ್ಭದಲ್ಲಿ, ಅಮಿಕಸ್ ಕ್ಯೂರಿ ಅಪರಾಜಿತಾ ಸಿಂಗ್ ವಾದಿಸಿ, ದೆಹಲಿಯಲ್ಲಿ ಸ್ಥಾಪಿಸಲಾದ ಸ್ಮೋಗ್ ಟವರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಹಿಂದಿನ ನಿರ್ದೇಶನಗಳ ನಂತರ ಅಳವಡಿಸಲಾದ ಸ್ಮೋಗ್ ಟವರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ನಾವು ಟವರ್ಗಳು ಕಾರ್ಯನಿರ್ವವಂತೆ ಮಾಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿತು.