ಚೆನ್ನೈ;- ಸನಾತನ ಧರ್ಮವನ್ನು ನಾನು ಕೊನೆಯವರೆಗೂ ವಿರೋಧಿಸುತ್ತಲೇ ಇರುತ್ತೇನೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ತಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಎಂದಿದ್ದರು. ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಕಾನೂನು ಪರಿಣಾಮ ಎದುರಿಸಲು ಸಿದ್ಧ ಎಂದು ಹೇಳಿದ್ದರು. ನಾನೇನೂ ತಪ್ಪಾಗಿ ಹೇಳಿಲ್ಲ. ನಾನು ಹೇಳಿದ್ದು ಸರಿ, ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ.
ನನ್ನ ಹೇಳಿಕೆಯನ್ನು ಬದಲಾಯಿಸುವುದಿಲ್ಲ. ನನ್ನ ಸಿದ್ಧಾಂತವನ್ನು ಮಾತನಾಡಿದ್ದೇನೆ. ಅಂಬೇಡ್ಕರ್, ಪೆರಿಯಾರ್ ಹೇಳಿದ್ದಕ್ಕಿಂತ ಹೆಚ್ಚಾಗಿ ಮಾತನಾಡಿಲ್ಲ. ನಾನು ಎಂಎಲ್ಎ ಆಗಬಹುದು, ಮಂತ್ರಿಯಾಗಬಹುದು ಅಥವಾ ಯುವ ಘಟಕದ ಕಾರ್ಯದರ್ಶಿಯಾಗಿ ನಾಳೆ ನಾನು ಇರಬಹುದು. ಆದರೆ ಮನುಷ್ಯನಾಗಿರುವುದು ಹೆಚ್ಚು ಮುಖ್ಯ ಎಂದು ತಿಳಿಸಿದ್ದಾರೆ.
ನಾವು ಹಲವಾರು ವರ್ಷಗಳಿಂದ ಸನಾತನದ ಬಗ್ಗೆ ಮಾತನಾಡುತ್ತಿದ್ದೇವೆ. ಇದು ನೂರಾರು ವರ್ಷಗಳ ಸಮಸ್ಯೆಯಾಗಿದೆ. ನಾವು ಇದನ್ನು ಕೊನೆವರೆಗೂ ವಿರೋಧಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.