ಮಂಡ್ಯ- ನಾಲೆಗೆ ಕಾರು ಉರುಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಘಡಕ್ಕೆ ಕಾರಣ ಬಹಿರಂಗವಾಗಿದೆ.
ಕಾರಿನಲ್ಲಿದ್ದ ಓರ್ವನ ಮೊಬೈಲ್ ರಿಂಗ್ ಆಗ್ತಿತ್ತು. ಮೊಬೈಲ್ ನಲ್ಲಿ ಓರ್ವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಐವರು ಬೇರೆ ಬೇರೆ ಕಡೆಯವರು. ತಿಪಟೂರು, ಚನ್ನರಾಯಪಟ್ಟಣ, ಭದ್ರಾವತಿ, ಶಿವಮೊಗ್ಗದವರು ಎನ್ನಲಾಗ್ತಿದೆ.
ಕಾರಿನಲ್ಲಿ ಊಟ, ಬಾಳೆ ಹಣ್ಣು ಕೂಡ ಪತ್ತೆಯಾಗಿದೆ. ಕಾರಿನಲ್ಲಿ ಊಟ ಕೊಂಡೋಗುತ್ತಿದ್ದದ್ದು ಪತ್ತೆಯಾಗಿದೆ. ಪಕ್ಕದಲ್ಲೆ ಹೊಸ ಸೇತುವೆ ನಿರ್ಮಾಣ ಆಗ್ತಿದೆ. ಘಟನೆ ನಡೆದಿರುವ ಸ್ಥಳದಲ್ಲಿ ಸೂಚನಾ ಫಲಕ, ತಡೆಗೋಡೆ ಇಲ್ಲದಿರುವುದು ಘಟನೆಗೆ ಕಾರಣ ಎನ್ನಲಾಗಿದೆ.
ತಡೆಗೋಡೆ ಮತ್ತು ಸೂಚನ ಫಲಕ ಅಳವಡಿಕೆಗೆ ತಾಕೀತು ಮಾಡಲಾಗಿದೆ. ಬೆಳಿಗ್ಗೆ 8 ಗಂಟೆಗೆ ಅಧಿಕಾರಿಗಳ ಸಭೆ ಕರೆದಿದ್ದೇನೆ.
ಘಟನಾ ಸ್ಥಳದಲ್ಲಿಯೆ ಖುದ್ದು ಪರಿಶೀಲನೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಧ್ಯಮಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಹಿತಿ ನೀಡಿದ್ದಾರೆ.