ರಾಮನಗರ: ರಾತ್ರಿ ವೇಳೆಯಲ್ಲಿ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ತಾಲ್ಲೂಕಿನ ರಸ್ತೆ ಜಕ್ಕಸಂದ್ರ ಹಾಗೂ ದೊಡ್ಡ ಮುದವಾಡಿ ಗೇಟ್ ಬಳಿ ಹಲವು ಅಂಗಡಿಗಳ ಕಳ್ಳತನಕ್ಕೆ ಯತ್ನಿಸಲಾಗಿದ್ದು.
ಜಕ್ಕಸಂದ್ರ ಗ್ರಾಮದಲ್ಲಿ ಮೊಬೈಲ್ ಅಂಗಡಿ, ದಿನಸಿ ಅಂಗಡಿ, ಗ್ರಂಥಿಗೆ ಅಂಗಡಿ, ಗಿಫ್ಟ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದು ಲಾಕರ್ ಗಳ ತಗೆಯಲು ಆಗದೆ ಬಂದ ದಾರಿಗೆ ಸುಂಕವಿಲ್ಲದಂತೆ ಹೊರಟಿದ್ದಾರೆ. ಆದರೆ ಗ್ರಂಥಿಗೆ ಅಂಗಡಿಯಲ್ಲಿ 3ಸಾವಿರ ನಗದು ಕಳ್ಳತನವಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಇನ್ನು ದೊಡ್ಡ ಮುದವಾಡಿ ಗೇಟ್ ನಲ್ಲಿ ಮೆಡಿಕಲ್ ಸ್ಟೋರ್, ಚಪ್ಪಲಿ ಅಂಗಡಿ ಹಾಗೂ ವಕೀಲರ ಕಚೇರಿಗೆ ನುಗ್ಗಿ ಕಡತಗಳು ಎಸೆದು ಹೋಗಿದ್ದಾರೆ .ಅಂಗಡಿಗಳಲ್ಲಿ ಕಳ್ಳತನ ಮಾಡುವ ವೇಳೆ ಸ್ಥಳೀಯರ ಕಂಡು ಓಡಿ ಹೋಗಿದ್ದು. ಕಳ್ಳತನವಾದ ಸ್ಥಳಕ್ಕೆ ಪೊಲೀಸರು ಆಗಮಿಸಿ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿ ಹಾರೋಹಳ್ಳಿ ಹಾಗೂ ಕನಕಪುರ ಗ್ರಾಮಾಂತರ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.