ಮುಂಬೈ: ಆ್ಯಪ್ ಮೂಲಕ ಲೈವ್ ಸೆಕ್ಸ್ ಶೋ (Live Sex Show) ನಡೆಸುತ್ತಿದ್ದ ಇಬ್ಬರು ನಟಿ ಮತ್ತು ಓರ್ವ ಯುವಕನನ್ನು ಮುಂಬೈ ಪೊಲೀಸರು (Mumbi Police) ಬಂಧಿಸಿದ್ದಾರೆ. ಗೂಗಲ್ ಪ್ಲೇ ಸ್ಟೋರಲ್ಲಿ ಲಭ್ಯವಿದ್ದ Pihu Official App ಹೆಸರಿನ ಮೂಲಕ ಮೂವರು ಈ ದಂಧೆ ನಡೆಸುತ್ತಿದ್ದರು. ಈ ಲೈವ್ ಶೋಗೆ ಗ್ರಾಹಕರಿಂದ 1 ಸಾವಿರ ರೂ. ನಿಂದ ಆರಂಭವಾಗಿ 10 ಸಾವಿರ ರೂ. ಶುಲ್ಕ ವಿಧಿಸುತ್ತಿದ್ದರು.
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ: ಪರಿಹಾರ, ಉಚಿತ ಸಲಹೆ
ಖಚಿತ ಮಾಹಿತಿ ಆಧಾರದಲ್ಲಿ ವೆರ್ಸೋವಾ ಪೊಲೀಸರು ವರ್ಸೋವಾದಲ್ಲಿದ್ದ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ನಂತರ ತನಿಶಾ ರಾಜೇಶ್ ಕನೋಜಿಯಾ(20), ತಮನ್ನಾ ಆರಿಫ್ ಖಾನ್ (34) ರುದ್ರ ನಾರಾಯಣ ರಾವುತ್(27) ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸಂಬಂಧಿಸಿದ ಸೆಕ್ಷನ್ ಆಡಿ ಕೇಸ್ ದಾಖಲಾಗಿದೆ. ಅಶ್ಲೀಲ ಕೃತ್ಯಗಳಲ್ಲಿ ತೊಡಗಿರುವುದು, ಕಂಪ್ಯೂಟರ್ ಸಾಧನಗಳ ಮೂಲಕ ಅಶ್ಲೀಲತೆಯಲ್ಲಿ ಭಾಗವಹಿಸಿದ ಆರೋಪ ಇವರ ಮೇಲಿದೆ.