ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮ ಬೆನ್ನಲೇ ಬೀದಿ ಬದಿ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿದೆ. ಜಯನಗರ ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ತೆರವು ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದ್ದು ವ್ಯಾಪಾರ ವಹಿವಾಟು ನಡೆಸುತ್ತಿರುವ ಬೀದಿಬದಿ ವ್ಯಾಪಾರಿಗಳು ಅತಂತ್ರ ಸ್ಥಿತಿ ಎದುರಿಸಬೇಕಾಗಿದೆ.ಫುಟ್ಪಾತ್ ವ್ಯಾಪಾರಿಗಳ ಅಂಗಡಿಮುಂಗಟ್ಟು ತೆರವುಗೊಳಿಸಲು ಸಜ್ಜಾಗಿದೆ.
ಹಬ್ಬದ ಸಂದರ್ಭದಲ್ಲಿ ಬಂಪರ್ ಮಾರಾಟಕ್ಕಾಗಿ ಎದುರು ನೋಡುತ್ತಿದ್ದ ಮಾರಾಟಗಾರು ಅತಿಕ್ರಮಣ ಫುಟ್ಪಾತ್ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.. ಬಿಬಿಎಂಪಿ ಮಾರ್ಷಲ್ಗಳ ತಂಡ ಸ್ಥಳಕ್ಕೆ ಆಗಮಿಸಿ, ಬೀದಿಬದಿ ವ್ಯಾಪಾರಿಗಳನ್ನು ಫುಟ್ಪಾತ್ನಿಂದ ತೆರವುಗೊಳಿಸಲಿದ್ದಾರೆ.ಜಾಗ ಖಾಲಿ ಮಾಡಲು ಕೊನೆಯ ಅವಕಾಶ ನೀಡಲಾಗುತ್ತದೆ ಎಂದು ಬಿಬಿಎಂಪಿ ಘೋಷಿಸಿದೆ.
25 ವರ್ಷಗಳಿಂದ ಈ ಪ್ರದೇಶದಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದೆವೆ ಜಯನಗರ ಕಾಂಪ್ಲೆಕ್ಸ್ಗೆ ಮಾತ್ರವೇ ಜನ ಇಲ್ಲಿಗೆ ಬರುವುದಿಲ್ಲ. ಬೀದಿಬದಿ ಶಾಪಿಂಗ್ಗಾಗಿಯೂ ಸಾಕಷ್ಟು ಜನರು ಬರುತ್ತಾರೆ. ಜನರು ನಮ್ಮ ಈ ಸರಕುಗಳನ್ನು ಇಷ್ಟಪಡುತ್ತಾರೆ.ಪ್ರತಿದಿನವೂ ಜನ ಇಲ್ಲಿಗೆ ಬಂದು ನಮ್ಮಿಂದ ಖರೀದಿಸುತ್ತಾರೆ.
ಇದು ಹಬ್ಬದ ಸೀಸನ್ ಆಗಿರುವುದರಿಂದ ಹೆಚ್ಚು ಜನ ಬರುತ್ತಾರೆ.ಆದರೆ ಬಿಬಿಎಂಪಿ ಅವರು ನಮ್ಮನ್ನು ಇದ್ದಕ್ಕಿದ್ದಂತೆ ಇಲ್ಲಿಂದ ಎದ್ದುಹೋಗುವಂತೆ ಕೇಳಿದರೆ ನಾವು ಎಲ್ಲಿಗೆ ಹೋಗಬೆಕು? ನಮಗೆ ಏನೂ ತೋಚುತ್ತಿಲ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ 35 ವರ್ಷಗಳಿಂದ ಬಟ್ಟೆಗಳನ್ನು ಮಾರಾಟ ಬೇರೆಯವರು ಬಂದು ನಿಮ್ಮನ್ನು ನಿಮ್ಮ ಮನೆಯಿಂದ ಹೊರಗೆ ಹೋಗಲು ಕೇಳಿದರೆ ಏನು ಮಾಡುತ್ತೀರಾ ಎಂದು ಕಣ್ಣೀರು ಇಡುತ್ತಿದ್ದಾರೆ.
ನೀವು ನಿಮ್ಮ ಮನೆಯಿಂದ ಹೊರಗೆ ಹೋಗುತ್ತೀರಾ? ಇಲ್ಲತಾನೆ? ಇಲ್ಲಿ ನಮಗೂ ಅಷ್ಟೇ. ವರ್ಷಗಳಿಂದ ಇಲ್ಲಿ ಬಟ್ಟೆ ಮಾರುತ್ತಿದ್ದೇವೆ. ನಾವು ಇಲ್ಲಿಂದ ಹೇಗೆ ಹೊರಹೋಗುವುದು? ಅಧಿಕಾರಿಗಳು ನಮಗೆ ಮಾರಾಟ ಮಾಡಲು ಬೇರೆ ಸ್ಥಳವನ್ನು ಸಹ ನೀಡಿಲ್ಲ. ನಮ್ಮ ವ್ಯಾಪಾರವನ್ನು ನಡೆಸಲು ನಾವು ಬೇರೆಲ್ಲಿಗೆ ಹೋಗಬೆಕು? ಎಂದು ವ್ಯಾಪಾರಸ್ಥರು ಗೋಳಾಡುತ್ತಿದ್ದಾರೆ ಆದರೂ ಅಧಿಕಾರಿಗಳು ಕ್ಯಾರೆ ಎನ್ನದೆ ತೆರೌುಗೊಳಿಸುತ್ತಿದ್ದಾರೆ.